ಅಂಬೇಡ್ಕರ್ ಬದುಕಿದ್ದರೆ ಅವರನ್ನೂ ಪಾಕಿಸ್ತಾನಿ ಪರ ಎಂದು ಬಿಜೆಪಿಯವರು ನಿಂದಿಸುತ್ತಿದ್ದರು: ಮೆಹಬೂಬಾ ಮುಫ್ತಿ

ಶ್ರೀನಗರ, ಜೂ.13: ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ ಬದುಕಿದ್ದರೆ ಅವರನ್ನೂ ಪಾಕಿಸ್ತಾನಿ ಪರ ಎಂದು ಬಿಜೆಪಿಯವರು ದೂಷಿಸುತ್ತಿದ್ದರು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ರವಿವಾರ ಹೇಳಿದ್ದಾರೆ.
370ನೇ ವಿಧಿಯ ಕುರಿತು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಮೆಹಬೂಬಾ, ಅಂಬೇಡ್ಕರ್ ರಚಿಸಿದ ಸಂವಿಧಾನವು ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಕೇಂದ್ರ ಸರಕಾರ ರದ್ದುಗೊಳಿಸಿದೆ. ಥ್ಯಾಂಕ್ಸ್ ಗಾಡ್, ಅಂಬೇಡ್ಕರ್ ಈಗ ಬದುಕಿಲ್ಲ. ಬದುಕಿದ್ದರೆ ಅವರನ್ನೂ ಪಾಕಿಸ್ತಾನ ಪರ ಎಂದು ಬಿಜೆಪಿಯವರು ದೂಷಿಸುತ್ತಿದ್ದರು ಎಂದು ಹೇಳಿದರು.
Next Story