ಮೈದಾನದಲ್ಲಿ ಕುಸಿದು ಬಿದ್ದಿದ್ದ ಎರಿಕ್ಸನ್ ಗೆ ಹೃದಯಾಘಾತವಾಗಿದೆ: ವೈದ್ಯರು

Photo: PTI
ಕೋಪನ್ ಹೇಗನ್ : ಫಿನ್ಲ್ಯಾಂಡ್ ವಿರುದ್ಧದ ಯುರೋ 2020 ರ ಆರಂಭಿಕ ಪಂದ್ಯದಲ್ಲಿ ಆಡುತ್ತಿದ್ದಾಗಲೇ ಮಿಡ್ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಏಕೆ ಕುಸಿದು ಬಿದ್ದಿದ್ದಾರೆ ಎಂಬುದಕ್ಕೆ ಇನ್ನೂ ಯಾವುದೇ ವಿವರಣೆ ಲಭಿಸಿಲ್ಲ ಎಂದು ಡೆನ್ಮಾರ್ಕ್ ತಂಡದ ವೈದ್ಯರು ಹೇಳಿದ್ದಾರೆ. ಆದರೆ ಅವರಿಗೆ ಹೃದಯಾಘಾತವಾಗಿತ್ತುಎಂದು ದೃಢ ಪಡಿಸಿದರು.
"ಅವರು ಹೃದಯ ಪುನಶ್ಚೇತನ ಗೊಳಿಸಿದ್ದೇವೆ. ಆದಾಗ್ಯೂ, 29 ವರ್ಷದ ಆಟಗಾರನಿಗೆ ಹೃದಯಾಘಾತದ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದೆ'' ಎಂದು ತಂಡದ ವೈದ್ಯ ಮಾರ್ಟನ್ ಬೋಸೆನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಇಲ್ಲಿಯವರೆಗೆ ಯಾವುದೇ ವಿವರಣೆ ಲಭಿಸಿಲ್ಲ. ಇನ್ನೂ ಆಸ್ಪತ್ರೆಯಲ್ಲಿರುವ ಆಟಗಾರನ ಮೇಲೆ ಇದುವರೆಗೆ ಮಾಡಿದ ಎಲ್ಲಾ ಪರೀಕ್ಷೆಗಳು ಉತ್ತಮವಾಗಿದ್ದವು" ಎಂದು ವೈದ್ಯರು ಹೇಳಿದರು.
ಶನಿವಾರ ಫಿನ್ಲ್ಯಾಂಡ್ ವಿರುದ್ಧದ ಡೆನ್ಮಾರ್ಕ್ನ ಗ್ರೂಪ್ ಬಿ ಪಂದ್ಯದ 43 ನೇ ನಿಮಿಷದಲ್ಲಿ ಕ್ರಿಶ್ಚಿಯನ್ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದರು. ಪಿಚ್ನಿಂದ ಕೊಂಡೊಯ್ಯುವ ಮೊದಲು ಅವರು ಸುಮಾರು 15 ನಿಮಿಷಗಳ ಕಾಲ ಮೈದಾನದಲ್ಲಿ ಮಲಗಿದ್ದರು ಹಾಗೂ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಎರಿಕ್ಸನ್ ಅವರು ಮೈದಾನದಲ್ಲಿ ಕುಸಿದುಬಿದ್ದಾಗ ತಾತ್ಕಾಲಿಕವಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಆಟಗಾರನು ಸ್ಥಿತಿ ಸ್ಥಿರ ವಾಗಿದೆ ಹಾಗೂ ಎಚ್ಚರವಾಗಿದ್ದಾರೆ ಎಂದು ವರದಿಗಳು ಬಂದ ನಂತರ ಸಂಜೆ ವೇಳೆಗೆ ಪಂದ್ಯವು ಪುನರಾರಂಭವಾಯಿತು. ಫಿನ್ಲ್ಯಾಂಡ್ಗೆ 1-0 ಅಂತರದಲ್ಲಿ ಜಯಗಳಿಸಿತ್ತು.