ಸುಳ್ಯ : ಡೆಂಗ್ ಜ್ವರಕ್ಕೆ ಯುವಕ ಬಲಿ
ಸುಳ್ಯ : ತಾಲೂಕಿನ ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಅವರ ಪುತ್ರ ಶಶಿಕುಮಾರ್ (27) ಡೆಂಗ್ ಜ್ವರಕ್ಕೆ ಬಲಿಯಾದ ಘಟನೆ ಸೋಮವಾರ ನಡೆದಿದೆ.
ಕಳೆದ 5 ದಿನಗಳ ಹಿಂದೆ ಡೆಂಗ್ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಸೋಮವಾರ ನಿಧನರಾದರೆಂದು ತಿಳಿದುಬಂದಿದೆ. ಇವರು ಸುಬ್ರಹ್ಮಣ್ಯ ದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು.
Next Story