ನಿಗದಿತ ಅವಧಿಗಿಂತ 14 ದಿನಗಳಿಗಿಂತ ಮುನ್ನ ದೇಶದ ಹೆಚ್ಚಿನ ಭಾಗಗಳಿಗೆ ಮುಂಗಾರು ಪ್ರವೇಶ: ಐಎಂಡಿ
ಹೊಸದಿಲ್ಲಿ, ಜೂ. 14: ನೈಋತ್ಯ ಮನ್ಸೂನ್ ನಿಗದಿತ ಅವಧಿಗಿಂತ ಎರಡು ವಾರಗಳಿಗಿಂತ ಮುನ್ನ ದೇಶದ ಹೆಚ್ಚಿನ ಭಾಗಗಳಿಗೆ ಪ್ರವೇಶಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ನೈಋತ್ಯ ಮನ್ಸೂನ್ ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್‌ನ ಕೆಲವು ಭಾಗಗಳಿಗೆ ಇನ್ನಷ್ಟೇ ಪ್ರವೇಶಿಸಬೇಕಿದೆ. ಪಂಜಾಬ್, ಹರ್ಯಾಣ, ದಿಲ್ಲಿ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಹಿಮಾಚಲ ಪ್ರದೇಶದ ಭಾಗಗಳಲ್ಲಿ ಕಳೆದ ಎರಡು ಮೂರು ದಿಗಳಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ. ಜೇನಮಣಿ ಹೇಳಿದ್ದಾರೆ.
ವಾಯುವ್ಯ ಪ್ರದೇಶದ ಮೇಲೆ ಪಶ್ಚಿಮದ ವ್ಯತ್ಯಯದ ಪರಿಣಾಮ ಇಲ್ಲ. ಈ ವಲಯದ ಮೇಲೆ ಪ್ರಬಲ ಮುಂಗಾರು ಮಾರುತ ಬೀಸುತ್ತಿರುವುದು ಇದಕ್ಕೆ ಏಕೈಕ ಕಾರಣ. ಪೂರ್ವ ಮಾರುತ ವೇಗ ಪಡೆದುಕೊಂಡಿರುವುದರಿಂದ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
Next Story





