ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ

ಉಡುಪಿ, ಜೂ.15: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಏಳು ಎಡಪಕ್ಷಗಳು ನೀಡಿರುವ ಕರೆಯಂತೆ ಸಿಪಿಎಂ ಪಕ್ಷದ ವತಿಯಿಂದ ಇಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸರಕಾರ ಕೂಡಲೇ ತೈಲ ಬೆಲೆ ಇಳಿಕೆ ಮಾಡಬೇಕು. ಆದಾಯ ತೆರಿಗೆಯಿಂದ ಹೊರಗಿ ರುವ ಕುಟುಂಬಗಳಿಗೆ 10 ಸಾವಿರ ರೂ. ನಗದು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಿಸಿ ಕೂಲಿ 600ರೂ.ಗೆ ಹೆಚ್ಚಿಸ ಬೇಕು. ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಕಾರ್ಯದರ್ಶಿ ಸಂಜೀವ ಶೇರಿಗಾರ್, ಆರ್‌ಪಿಐ ಅಧ್ಯಕ್ಷ ಶೇಖರ್ ಹಾವಂಜೆ, ಸಿಐಟಿಯು ಜಿಲ್ಲಾಅಧ್ಯಕ್ಷ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಶಶಿಧರ್ ಗೊಲ್ಲ, ಎಚ್.ನರಸಿಂಹ, ಕವಿರಾಜ್ ಎಸ್., ವೆಂಕಟೇಶ್ ಕೋಣಿ, ವಿದ್ಯಾರಾಜ್, ಸದಾಶಿವ ಬ್ರಹ್ಮವಾರ, ಮಹಾಬಲ ವಡೇರಹೊಬಳಿ ಉಪಸ್ಥಿತರಿದ್ದರು.
ಕುಂದಾಪುರದ ಮಂಗಳೂರು ಟೈಲ್ ವರ್ಕ್ ಸಿಪಿಎಂ ಶಾಖೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಸುರೇಶ್ ಕಲ್ಲಾಗರ ಮಾತನಾಡಿದರು. ಪ್ರಭಾಕರ ಟೈಲ್ಸ್ ಶಾಖೆ, ಮೂಕಾಂಬಿಕ ಟೈಲ್ಸ್ ಶಾಖೆ, ಹೆಮ್ಮಾಡಿ ಕಟ್ಟಡ ಶಾಖೆ, ಬಿ.ಸಿ. ರಸ್ತೆ ವಡೇರ ಹೋಬಳಿ ಸಿಪಿಎಂ ಶಾಖೆಗಳು ಸ್ಥಳೀಯವಾಗಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಪ್ರಕಾಶಕೋಣಿ, ಸುಧಾಕರ, ಸಂತೋಷ ಹೆಮ್ಮಾಡಿ, ಜಗದೀಶ ಆಚಾರ್, ನರಸಿಂಹ ಹೆಮ್ಮಾಡಿ, ಮಂಜುನಾಥ ಶೋಗನ್, ರವಿ ವಿ.ಎಂ. ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೆಲೆ ಏರಿಕೆ ವಿರುದ್ದ ಮನೆ ಮನೆಯಲ್ಲೂ ಆಟೋ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ಕುಂದಾಪುರದ ಬಿ.ಸಿ.ರಸ್ತೆ ವಡೇರಹೋಬಳಿಯಲ್ಲಿ ಸಿಪಿಎಂ ಶಾಖೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ಸುರೇಶ್ ಕಲ್ಲಾಗರ, ಶಾಖಾ ಕಾರ್ಯದರ್ಶಿ ಮಂಜುನಾಥ ಶೋಗನ್, ಸದಸ್ಯರಾದ ರವಿ ವಿ.ಎಂ., ಉದಯ, ಶೇಖರ ಡಿ. ಉಪಸ್ಥಿತರಿದ್ದರು







