ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಎರಡು ಕುಟುಂಬಗಳಿಗೆ ಮನೆ ಹಸ್ತಾಂತರ

ಉಡುಪಿ, ಜೂ.15: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯಕ್ರಮದಡಿಯಲ್ಲಿ ದಾನಿಗಳ ಸಹಾಯದಿಂದ ಅರ್ಥಿಕವಾಗಿ ಹಿಂದುಳಿದ ಎರಡು ಕುಟುಂಬಗಳಿಗೆ ಮಂಗಳ ವಾರ ಮನೆ ಹಸ್ತಾಂತರ ಮಾಡಲಾಯಿತು.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಉಪ್ಪಿನ ಕೋಟೆ ಮನೆ ಮಾಲಕ ಅನ್ವರ್ ಸಾದೀಕ್‌ಗೆ ಹಾಗೂ ಪ್ರೊ.ಅಬ್ದುಲ್ ಅಝೀಝ್ ಮನೆ ಮಾಲಕ ದೇವದಾಸ ಖಾರ್ವಿಯವರಿಗೆ ಕೀಲಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ತೋನ್ಸೆ ಗ್ರಾಪಂ ಅಧ್ಯಕ್ಷ ಲತಾ, ಸದಸ್ಯರಾದ ಇದ್ರಿಸ್ ಹೂಡೆ, ಅರುಣಾ ಫರ್ನಾಂಡೀಸ್, ಯಶೋದಾ, ಡಾ.ಫಹೀಮ್, ಜಮೀಲಾ, ಮಮ್ತಾಝ್, ಕುಸುಮ, ವಿಜಯ್, ಗ್ರಾಪಂ ಮಾಜಿ ಅಧ್ಯಕ್ಷೆ ಫೌಝಿಯಾ ಸಾದಿಕ್, ಮಾಜಿ ಗ್ರಾಪಂ ಸದಸ್ಯ ಉಸ್ತಾದ್ ಸಾದೀಕ್ ಮೊದಲಾದವರು ಉಪಸ್ಥಿತರಿದ್ದರು.
Next Story





