ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಾನೂನು ವಿಭಾಗದಿಂದ ಪ್ರತಿಭಟನೆ

ಉಡುಪಿ, ಜೂ.15: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅವೈಜ್ಞಾನಿಕ ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ವತಿಯಿಂದ ಇಂದು ಅಂಬಲ್ಪಾಡಿ ರಿಲಾಯನ್ಸ್ ಪೆಟ್ರೋಲ್ ಬಂಕ್‌ನ ಎದುರುಗಡೆ ಪ್ರತಿಭಟನೆ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ರಾಜಿನಾಮೆಗೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಾಳ, ನ್ಯಾಯವಾದಿ ಗಳಾದ ಶಿವರಾಮ ಶ್ರೀಯಾನ್, ರೆನಾಲ್ಡ್ ಪ್ರವೀಣ್ ಕುಮಾರ್, ವಿಲ್ಸನ್ ರೊಡ್ರಿಗಸ್, ಹಬೀಬ್‌ಅಲಿ ಖಾದರ್, ಅನಂತ್ ನಾಯಕ್, ಸದಾಶಿವ ಅಮೀನ್, ನಾಗರಂಜನ್, ಸಂಕಪ್ಪ ಎ., ಆನಂದ ಮಡಿವಾಳ, ರವಿಪ್ರಕಾಶ್, ಚಂದ್ರಶೇಖರ್, ಕಿರಣ್ ಶೆಟ್ಟಿ, ರೋಹನ್ ಕುಮಾರ್, ರಾಜೇಂದ್ರ ಕುಮಾರ್, ಸಂದೇಶ್, ರಾಜು ಪೂಜಾರಿ, ಅಬ್ದುಲ್ ರೆಹಮಾನ್, ಭರತ್ ಪೈ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಜ್ಯೋತಿ ಹೆಬ್ಬಾರ್, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಜನಾರ್ದನ ಭಂಡಾರ್ಕಾರ್, ಯತೀಶ್ ಕರ್ಕೇರಾ, ಪ್ರಶಾಂತ್ ಪೂಜಾರಿ, ಗಣೇಶ್ ನೆರ್ಗಿ, ಉಪೇಂದ್ರ ಮೆಂಡನ್, ಹಮದ್, ಪ್ರಭಾಕರ್ ಆಚಾರ್ಯ ಮೊದಲಾದವರು ಭಾಗವಹಿಸಿದ್ದರು.





