Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜನರ ರಕ್ಷಣೆಯ ‘ಖಾಸಗೀಕರಣ’

ಜನರ ರಕ್ಷಣೆಯ ‘ಖಾಸಗೀಕರಣ’

ಅರುಣ್ ಜೋಳದಕೂಡ್ಲಿಗಿಅರುಣ್ ಜೋಳದಕೂಡ್ಲಿಗಿ16 Jun 2021 12:10 AM IST
share
ಜನರ ರಕ್ಷಣೆಯ ‘ಖಾಸಗೀಕರಣ’

ಕೊರೋನ ಕಾರಣ ಲಾಕ್‌ಡೌನ್ ಶುರುವಾದಂದಿನಿಂದ ದಿನದಿನದ ದುಡಿಮೆ ನಂಬಿ ಬದುಕುವ ಸಮುದಾಯಗಳು ಹಸಿವನ್ನು ನೀಗಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿವೆ. ಇದರಲ್ಲಿ ಅಲೆಮಾರಿ/ಅರೆ ಅಲೆಮಾರಿ/ಆದಿವಾಸಿ/ದಲಿತ/ದಮನಿತ/ಕೆಳವರ್ಗಗಳ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ತನ್ನ ಪ್ರಜೆಗಳು ಹಸಿವಿನಿಂದ ಬಳಲದಂತೆ ಕಾಪಾಡುವುದು ಪ್ರಜಾಪ್ರಭುತ್ವ ಸರಕಾರದ ಮುಖ್ಯ ಕರ್ತವ್ಯ. ಹೀಗಾಗಿಯೇ ಯುಪಿಎ ಸರಕಾರ 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿತ್ತು. 2011 ರಿಂದ ಈ ಕಾಯ್ದೆ ಜಾರಿಯಾಗದಂತೆ ತಡೆದ ಬಿಜೆಪಿ ಸರಕಾರ ಇದೀಗ ಕೇಂದ್ರದಲ್ಲಿದೆ. ಹೀಗಿರುವಾಗ ಈ ಕಾಯ್ದೆಯಡಿ ಜನಸಾಮಾನ್ಯರ ಹಸಿವನ್ನು ಈ ಸರಕಾರ ಹೇಗೆ ನೀಗಿಸುತ್ತಿದೆ ಎಂದು ಪರಿಶೀಲಿಸಿದರೆ ತೀವ್ರ ನಿರಾಸೆಯಾಗುತ್ತದೆ. ಇದರ ವೈಫಲ್ಯದಿಂದಾಗಿಯೇ ಇಂದು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಜನರಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ.

ಯಾರಾದರೇನು ಜನರ ಹಸಿವು ನೀಗಿಸಿದರೆ ಸಾಕಲ್ಲವೇ ಎನ್ನುವ ಪ್ರಶ್ನೆಯೊಂದು ದುತ್ತನೆ ಎದುರಾಗುತ್ತದೆ. ಆದರೆ ಪ್ರಜಾಪ್ರಭುತ್ವ ಸರಕಾರವು ಜನರ ಹಸಿವನ್ನು ನೀಗಿಸಿದರೆ ಅದು ಅವರ ಹಕ್ಕಿನ ಭಾಗ. ಜನರದೇ ತೆರಿಗೆ ಹಣದ ಫಲ. ಹಾಗಾಗಿ ಜನಸಾಮಾನ್ಯರು ಯಾರದೋ ಮರ್ಜಿಗೆ ಒಳಗಾಗುವುದು ತಪ್ಪುತ್ತದೆ. ಜನರ ಕಷ್ಟದಲ್ಲಿ ಸರಕಾರ ನೆರವಾದರೆ, ಒಂದು ಪ್ರಜಾಪ್ರಭುತ್ವ ಸರಕಾರದ ಬಗ್ಗೆಯೂ ಜನರಲ್ಲಿ ವಿಶ್ವಾಸ ಗಟ್ಟಿಯಾಗುತ್ತದೆ. ಆದರೆ ಇಂದು ಜನರ ಸಂಕಷ್ಟಗಳನ್ನು ನೀಗಿಸಲು ಖಾಸಗಿ ವಲಯ ಮುಂದೆ ಬರುತ್ತಿದೆ. ಪ್ರತಿದಿನ ಆಹಾರದ ಕಿಟ್ ಪಡೆಯುವ ಜನರ ದೀನತೆಯ ಫೋಟೊಗಳು ಹಂಚಿಕೆಯಾಗುತ್ತಿವೆ. ಬಹುತೇಕ ಫೋಟೊಗಳಲ್ಲಿ ಆಹಾರದ ಕಿಟ್ ಪಡೆಯುವವರ ಅಸಹಾಯಕತೆಯೂ, ಆಹಾರದ ಕಿಟ್ ಕೊಡುವವರ ಉತ್ತಮ ಸ್ಥಿತಿ ಕಣ್ಣಿಗೆ ರಾಚುತ್ತದೆ. ಇದು ದೇಶದ ವೈರುಧ್ಯ. ಇದರಲ್ಲಿಯೇ ಕೆಲವರು ತಮ್ಮ ಬ್ಯಾಲೆನ್ಸ್ ಶೀಟ್ ಪೂರ್ತಿ ಮಾಡಿಕೊಳ್ಳುತ್ತಿದ್ದಾರೆ.

ಭ್ರಷ್ಟತೆಯಿಂದಲೂ, ನೀಚತನದಿಂದಲೂ ಜನರ ಪಾಲಿನ ಹಣ ಸಂಪತ್ತು ಅವಕಾಶಗಳನ್ನು ದೋಚಿದವರು, ಅದರ ಬಿಡಿಗಾಸಿನ ಪಾಲನ್ನು ಜನರಿಗೆ ನೀಡಿ ಅನ್ಯಾಯ ಅಕ್ರಮಗಳ ಕೆಡುಕಿನ ಇಮೇಜನ್ನು ಒಳಿತನ್ನಾಗಿಸಿಕೊಳ್ಳುವ ಸ್ಪರ್ಧೆ ಏರ್ಪಟ್ಟಿದೆ. ಈ ಒಳಿತಿನ ಇಮೇಜಿಗಾಗಿಯೇ ಕಿಟ್ ವಿತರಣೆಯ ಸಾವಿರಾರು ಫೋಟೊಗಳು ದಿನನಿತ್ಯ ಹಂಚಿಕೆಯಾಗುತ್ತಿವೆ. ಇಲ್ಲಿಯೂ ಒಂದು ಸಾವಿರ ಖರ್ಚು ಮಾಡಿ ಹತ್ತು ಸಾವಿರದ ಲೆಕ್ಕ ತೋರಿಸುವವರ ಸಂಖ್ಯೆಯೂ ದೊಡ್ಡದಿವೆ. ಇದರಲ್ಲಿ ಕಪ್ಪುಹಣವನ್ನು ಬಿಳಿಮಾಡಿಕೊಳ್ಳುವ ವೈಯಕ್ತಿಕ ಲಾಭ ಮತ್ತು ದಾನಧರ್ಮ ಮಾಡಿದ ಒಳ್ಳೆಯತನದ ಜನಾಭಿಪ್ರಾಯ ಹೀಗೆ ಏಕಕಾಲಕ್ಕೆ ಎರಡು ಬಗೆಯ ಲಾಭಗಳಿವೆ. ಈ ಗ್ರಹಿಕೆಗೆ ವಿರುದ್ಧವಾದ ಬೆರಳೆಣಿಕೆಯ ಅಪವಾದಗಳು ಇರಬಹುದು.

ಬಹುಪಾಲು ನ್ಯಾಯಯುತವಾಗಿ ದುಡಿದವರಲ್ಲಿ ಹೆಚ್ಚುವರಿ ಹಣ ಅಥವಾ ಸಂಪತ್ತಿನ ಸಂಗ್ರಹ ಕಡಿಮೆ ಅಥವಾ ಅವರ ಜೀವನಾವಶ್ಯಕ ಅಗತ್ಯದಷ್ಟಿರುತ್ತದೆ. ಅಂತಹವರು ಹೀಗೆ ಜನರಿಗೆ ಸಹಾಯ ಮಾಡಿ ಫೋಟೊ ತೆಗೆಸಿಕೊಳ್ಳಲು ಆಗುವುದಿಲ್ಲ. ಅಂತೆಯೇ ತಮ್ಮ ನ್ಯಾಯಯುತ ದುಡಿಮೆಯಲ್ಲಿ ಒಂದಷ್ಟು ಸಹಾಯ ಮಾಡಿದರೂ ಅದು ಯಾರಿಗೂ ತಿಳಿಯದಿರಲಿ ಎಂದು ಬಯಸುವವರು ಹೆಚ್ಚು. ಯಾಕೆಂದರೆ ಅಂತಹವರಿಗೆ ಪ್ರಚಾರದ ಅಗತ್ಯವೂ ಇರುವುದಿಲ್ಲ. ಮನುಷ್ಯ ಸಹಜ ತೋರಿಕೆಯ ಬಯಕೆ ಇದ್ದರೂ, ದೊಡ್ಡ ದೊಡ್ಡ ಸಹಾಯಾರ್ಥಗಳ ಪ್ರಚಾರದ ಭರಾಟೆಯಲ್ಲಿ ತಮ್ಮ ಚಿಕ್ಕಪುಟ್ಟ ಸಹಾಯವನ್ನು ಹೇಳಿಕೊಳ್ಳುವುದೂ ಕಷ್ಟ. ಸಾಮಾನ್ಯವಾಗಿ ನ್ಯಾಯಯುತವಲ್ಲದ, ಕಾನೂನುಬಾಹಿರ ನಡೆಗಳಿಂದ ಜನರ ಪಾಲಿನ ಹಣ, ಸಂಪತ್ತನ್ನು ದೋಚಿದವರೂ ಇಂದು ಜನರ ಸಹಾಯಕ್ಕೆ ನಿಂತಿರುವ ಚಿತ್ರಗಳು ಕಾಣುತ್ತದೆ. ಇದರಲ್ಲಿ ಯಾರನ್ನಾದರೂ ನಿಮ್ಮ ಸಂಪತ್ತಿನ ಶೇ. ಎಷ್ಟು ಪಾಲು ಹೀಗೆ ಜನರಿಗೆ ಸಹಾಯ ಮಾಡಿದ್ದೀರಿ ಎಂದು ಕೇಳಿದರೆ, ಅವರು ಅಕಸ್ಮಾತ್ ಸತ್ಯಕ್ಕೆ ಹತ್ತಿರವಾದ ಉತ್ತರ ಕೊಟ್ಟರೆ ಈ ನೆರವಿನ ಆಳದಲ್ಲಿರುವ ಕ್ರೌರ್ಯ ಬಯಲಾಗುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಕೆಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜನರಿಗೆ ನೆರವು ನೀಡುವುದಕ್ಕಿಂತ, ನ್ಯಾಯಯುತವಾಗಿ ಸರಕಾರಕ್ಕೆ ಸಲ್ಲಬೇಕಾದ ನೂರಾರು ಕೋಟಿ ರೂಪಾಯಿ ತೆರಿಗೆ ಕಟ್ಟುವುದು ಜನತೆಯ ಹಿತದೃಷ್ಟಿಯಿಂದ ಹೆಚ್ಚು ಲಾಭಕರ.

ಕೆಲವು ಕಡೆಗಳಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ಆಯಾ ಭಾಗದ ಸರಕಾರೇತರ ಸಂಸ್ಥೆಗಳಲ್ಲಿಯೂ, ಸಿರಿವಂತ ಧನಿಕರಲ್ಲಿಯೂ, ರಾಜಕಾರಣಿಗಳಲ್ಲಿಯೂ ಮನವಿ ಮಾಡಿ, ಅಗತ್ಯವಿರುವ ಸಮುದಾಯಗಳಿಗೆ ನೆರವು ಕೊಡಿಸಲಾಗುತ್ತಿದೆ. ಇಲ್ಲಿ ಸರಕಾರ ತನ್ನ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ವರ್ಗಾಯಿಸುತ್ತಿದೆ. ಹೀಗೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಸ್ಪಂದಿಸಿದವರು ಮುಂದೆ ತಮಗೆ ಬೇಕಾದ ಸರಕಾರಿ ನೆರವನ್ನು ಇದೇ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ನಿರೀಕ್ಷಿಸುತ್ತಾರೆ. ಆಗ ಅವರು ನೆರವು ನೀಡಿದ ಖರ್ಚಿನ ಹತ್ತು ಪಟ್ಟು ಲಾಭ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಈ ಎಲ್ಲಾ ಕಾರಣಗಳಿಂದಾಗಿ ಇಂದು ಜನಸಾಮಾನ್ಯರು ಖಾಸಗಿಯವರತ್ತ ಕೈಚಾಚುತ್ತಿರುವ ಈ ದೀನ ಸ್ಥಿತಿಯು ಪ್ರಜಾಪ್ರಭುತ್ವ ಸರಕಾರದ ಅಧಃಪತನಕ್ಕೆ ಸಾಕ್ಷಿಯಾಗಿದೆ. ಇದರ ದೂರಗಾಮಿ ಪರಿಣಾಮವೆಂದರೆ, ಅಂತಿಮವಾಗಿ ಖಾಸಗೀಕರಣದ ಬಗ್ಗೆ ಜನರಲ್ಲಿ ಒಲವು ಮೂಡತೊಡಗುತ್ತದೆ.

share
ಅರುಣ್ ಜೋಳದಕೂಡ್ಲಿಗಿ
ಅರುಣ್ ಜೋಳದಕೂಡ್ಲಿಗಿ
Next Story
X