ಐರೋಪ್ಯ ಒಕ್ಕೂಟದಲ್ಲಿ ಬಾಸ್ಮತಿಗೆ ಬ್ರಾಂಡಿಂಗ್ ಹಕ್ಕು : ಜಂಟಿ ಮಾನ್ಯತೆಗೆ ಭಾರತ-ಪಾಕಿಸ್ತಾನ ಒಪ್ಪಂದ ಸಾಧ್ಯತೆ
ಹೊಸದಿಲ್ಲಿ, ಜೂ. 15: ಐರೋಪ್ಯ ಒಕ್ಕೂಟ (ಇಯು)ದಲ್ಲಿ ಬಾಸ್ಮತಿ ಅಕ್ಕಿಯ ಪ್ರತಿಷ್ಠಿತ ಬ್ರಾಂಡಿಂಗ್ ಹಕ್ಕಿನ ಮಾನ್ಯತೆಯನ್ನು ಜಗತ್ತಿನ ಎರಡು ಬಾಸ್ಮತಿ ಅಕ್ಕಿ ಉತ್ಪಾದಕ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನ ಹಂಚಿಕೊಳ್ಳುವ ಸಾಧ್ಯತೆ ಇದೆ.
ಐರೋಪ್ಯ ಒಕ್ಕೂಟದಲ್ಲಿ ತಮ್ಮ ಉತ್ಪನ್ನಗಳಿಗೆ ಜಿಐ ಟ್ಯಾಗ್ ಅಥವಾ ಪ್ರೊಟೆಕ್ಟೆಡ್ ಜಿಯೋಗ್ರಾಫಿಕಲ್ ಇಂಡಿಕೇಶನ್ (ಪಿಜಿಐ-ರಕ್ಷಿತ ಭೌಗೋಳಿಕ ಸೂಚಕ) ಪಡೆಯಲು ಪ್ರತಿಪಾದನೆಯನ್ನು ಉಭಯ ರಾಷ್ಟ್ರಗಳು ಪರಸ್ಪರ ವಿರೋಧಿಸಿದ ಬಳಿಕ ಎರಡೂ ದೇಶಗಳು ಈ ಒಪ್ಪಂದಕ್ಕೆ ತಲುಪಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
‘‘ಜಗತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾತ್ರ ಬಾಸ್ಮತಿ ಉತ್ಪಾಸುತ್ತಿದ್ದು, ಈ ಮಾನ್ಯತೆ ಹಂಚಿಕೊಳ್ಳಲು ಉಭಯ ರಾಷ್ಟ್ರಗಳ ಯೋಜಿಸುತ್ತಿರುವುದರಿಂದ ಎರಡೂ ರಾಷ್ಟ್ರಗಳು ಈ ಕುರಿತು ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕಾಣುತ್ತದೆ’’ ಎಂದು ಮೂಲಗಳು The print ಗೆ ತಿಳಿಸಿವೆ.
ಬಾಸ್ಮತಿ ಅಕ್ಕಿ ಉತ್ಪಾದಿಸುವ ಉಭಯ ರಾಷ್ಟ್ರಗಳ ರೈತರ ಬದುಕನ್ನು ಕೂಡ ಈ ವಿಷಯ ಒಳಗೊಂಡಿದೆ. ಇದು ಉಭಯ ರಾಷ್ಟ್ರಗಳ ಪ್ರಮುಖ ಆದಾಯದ ಮೂಲ ಎಂದು ಮೂಲಗಳು ತಿಳಿಸಿವೆ.