ಚೆನ್ನೈ: ಮೃಗಾಲಯದ ಮತ್ತೊಂದು ಹೆಣ್ಣು ಸಿಂಹ ಕೋವಿಡ್ -19 ಗೆ ಬಲಿ

Photo : Indian Express
ಚೆನ್ನೈ: ಕೋವಿಡ್ -19 ನಿಂದಾಗಿ ವಂಡಲೂರು ಮೃಗಾಲಯದಲ್ಲಿ ಬುಧವಾರ ಮತ್ತೊಂದು ಕವಿತಾ ಹೆಸರಿನ ಹೆಣ್ಣು ಸಿಂಹವೊಂದು ಸಾವನ್ನಪ್ಪಿದೆ.
ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದ 23 ವರ್ಷದ ಕವಿತಾ ಹೆಸರಿನ ಸಿಂಹ ಬುಧವಾರ ಬೆಳಿಗ್ಗೆ ಕೋವಿಡ್-19 ಕಾಯಿಲೆಗೆ ಬಲಿಯಾಗಿದೆ ಎಂದು ಮೂಲಗಳು The New Indian Express ಗೆ ಖಚಿತಪಡಿಸಿವೆ.
ವೈರಸ್ ಸೋಂಕಿಗೆ ಒಳಗಾದ ನಂತರ ಸಿಂಹಿಣಿಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ಸಿಂಹಿಣಿ ಘನ ಆಹಾರವನ್ನು ತಿನ್ನುತ್ತಿರಲಿಲ್ಲ ಹಾಗೂ ದ್ರವ ಆಹಾರವನ್ನು ನೀಡಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮೃಗಾಲಯದಲ್ಲಿ 14 ಸಿಂಹಗಳಿವೆ. ಈ ಪೈಕಿ ಮೂರು ಸಿಂಹಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿವೆ. ಮೃಗಾಲಯದ ಪಶು ವೈದ್ಯರ ತಂಡವು ತನುವಾಸ್ ನ ತಜ್ಞರ ಸಹಯೋಗದೊಂದಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸೋಮವಾರ ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.
Next Story