ನಟ ಸುದೀಪ್ ಸೇರಿದಂತೆ ಮೂವರು ಪ್ರಮುಖರ ಖಾತೆಗಳನ್ನು ಸ್ಥಗಿತಗೊಳಿಸಿ ಮರುಸ್ಥಾಪಿಸಿದ ಚೆಸ್ ಡಾಟ್ ಕಾಂ
ಮೋಸದಾಟದ ಕುರಿತು ವಿಶ್ವನಾಥನ್ ಆನಂದ್ ಅಸಮಾಧಾನ

photo: sportskreeda
ಝೆರೋದಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ ವಾಲಾ ಮತ್ತು ನಟ ಕಿಚ್ಚಾ ಸುದೀಪ್ ರವರು ಚೆಸ್ ಮಾಜಿ ವಿಶ್ವ ವಿಶ್ವಚಾಂಪಿಯನ್ ವಿರುದ್ಧ ಆನ್ ಲೈನ್ ನಲ್ಲಿ ಮೋಸದಾಟ ಆಡಿದ್ದಾರೆಂಬ ಕಾರಣಕ್ಕೆ ಚೆಸ್ ಡಾಟ್ ಕಾಂ ಮೂವರ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಕೆಲ ಸಮಯಗಳ ನಂತರ ಸ್ಪಷ್ಟೀಕರಣದೊಂದಿಗೆ ಅಕೌಂಟ್ ಮರುಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಪೀಡಿತರ ನೆರವಿಗಾಗಿ ಚೆಸ್ ಡಾಟ್ ಕಾಂ ನಡೆಸಿದ್ದ 10 ಲಕ್ಷ ರೂ.ಯ ಆನ್ ಲೈನ್ ಪಂದ್ಯಾಟದಲ್ಲಿ ಅಲ್ಲದ ಅನುಮೋದನೆ ವಿಶ್ಲೇಷಣೆ ಮತ್ತು ನೆರವು ಪಡೆದು ಆಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಈ ಪಂದ್ಯಾಟದಲ್ಲಿ ಯಜುವೇಂದ್ರ ಚಾಹಲ್, ರಿತೇಶ್ ದೇಶ್ ಮುಖ್, ಅಮೀರ್ ಖಾನ್, ಅರ್ಜಿತ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಪಂದ್ಯಾಟದಲ್ಲಿ ವಿಶ್ವನಾಥನ್ ಆನಂದ್ 9ರಲ್ಲಿ 8 ಪಂದ್ಯಗಳನ್ನು ಗೆದ್ದರೆ ನಿಖಿಲ್ ಕಾಮತ್ ವಿರುದ್ಧದ ಪಂದ್ಯದಲ್ಲಿ ಅವರು ಸೋಲು ಕಂಡಿದ್ದರು. ಈ ಬಗ್ಗೆ ವಿಶ್ವನಾಥನ್ ಆನಂದ್ ಟ್ವಿಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿ, ನಾನು ಆಡಿದಂತೆ ಎಲ್ಲರೂ ಆಡಬಹುದೆಂದು ಭಾವಿಸಿದ್ದೆ. ಆದರೆ ಅಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು ಎಂದಿದ್ದರು.
ಬಳಿಕ ಈ ಕುರಿತು ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿದ ನಿಖಿಲ್ ಕಾಮತ್, "ತಾನು ವಿಶ್ಲೇಷಣೆಗಳು ಮತ್ತು ಕಲೆವು ಪರಿಣಿತರ ಮತ್ತು ಕಂಪ್ಯೂಟರ್ ನೆರವು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. "ನಾನು ನಿಜವಾಗಿಯೂ ವಿಶ್ವನಾಥನ್ ಆನಂದ್ ರನ್ನು ಸೋಲಿಸಿದ್ದೇನೆಂದು ಹಲವರು ಯೋಚಿಸುತ್ತಿರುವುದು ಆಶ್ಚರ್ಯಕರವಾಗಿದೆ. ಇದು ಹೇಗಿದೆ ಎಂದರೆ ಬೆಳಗ್ಗೆ ಎದ್ದು ಸೀದಾ ಉಸೈನ್ ಬೋಲ್ಟ್ ಜೊತೆ 100 ಮೀ. ರೇಸ್ ನಲ್ಲಿ ಪಾಲ್ಗೊಂಡು ಗೆದ್ದುಬಂದ ಹಾಗೆ. ನಾನು ಕಂಪ್ಯೂಟರ್, ಗೇಮ್ ಪರೀಕ್ಷಕರು ಹಾಗೂ ಇನ್ನಿತರರ ಸಹಾಯ ಪಡೆದಿದ್ದೆ. ವಿಶ್ವನಾಥನ್ ಜೊತೆಗಿನ ಆಟ ಒಂದು ಕಲಿಕೆಯಂತೆ. ಇಲ್ಲಿ ಈ ರೀತಿಯ ತೊಂದರೆಗಳು ಎದುರಾಗಬಹುದೆಂದು ನಾನು ಅಂದುಕೊಂಡಿರಲಿಲ್ಲ" ಎಂದು ಹೇಳಿದ್ದರು.
ಆಟದಲ್ಲಿ ಪಾಲ್ಗೊಂಡವರಲ್ಲಿ ಕಿಚ್ಚ ಸುದೀಪ್, ಸಾಜಿದ್ ನಾದಿಯಾಡ್ ವಾಲಾ ಹಾಗೂ ನಿಖಿಲ್ ಕಾಮತ್ ನಿಯಮಗಳನ್ನು ಉಲ್ಲಂಘಿಸಿ ಆವಾಡಿದ್ದರು ಎನ್ನಲಾಗಿದೆ. ಇವರ ಮೂವರ ಖಾತೆಗಳನ್ನು ನಿಷೇಧಿಸಿದ ಬಳಿಕ "ಪಂದ್ಯಾಟದ ಸಂದರ್ಭದಲ್ಲಿ ಪ್ರಶ್ನಾರ್ಹವಾಗಿ ಕಂಡು ಬಂದ ಎಲ್ಲ ಖಾತೆಗಳನ್ನು ಮರುಸ್ಥಾಪನೆ ಮಾಡಲಾಗಿದೆ. ಆಟಗಾರರು ನಿಯಮಗಳನ್ನು ಅರ್ಥ ಮಾಡಿಕೊಳ್ಳದ ಕಾರಣ ಇಂತಹ ತೊಂದರೆಗಳುಂಟಾಗಿದೆ. ಈ ವಿಚಾರವನ್ನು ನಾವಾಗಲಿ ವಿಶ್ವನಾಥನ್ ಆನಂದ್ ಆಗಲಿ ಮುಂದೆ ಕೊಂಡು ಹೋಗುವುದಿಲ್ಲ" ಎಂದು ಚೆಸ್ ಡಾಟ್ ಕಾಂ ಹೇಳಿದೆ.
Yesterday was a celebrity simul for people to raise money It was a fun experience upholding the ethics of the game.I just played the position onthe board and expected the same from everyone . pic.twitter.com/ISJcguA8jQ
— Viswanathan Anand (@vishy64theking) June 14, 2021
Kichcha Sudeep unfair too and it went unnoticed. His accuracy was 83% against Anand and was 8 and 20% against previous opponets. He lasted 58moves against Anand while he could last 10 and 37moves in previous games. Just that his cheating wasnt as obvious as Nikhil. pic.twitter.com/4xi4lurG3z
— Rahamat K (@UTurnology) June 14, 2021
— Samay Raina (@ReheSamay) June 14, 2021
How can cheating be fun in a COVID charity event? You disrespected not only chess but also other guests and thousands of fans watching the event. https://t.co/QXiddAduIH
— Harikrishna (@HariChess) June 14, 2021