ಹೈದರಾಬಾದ್‍ಗೆ ತೆರಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸಿ.ಪಿ.ಯೋಗೇಶ್ವರ್

ಬೆಂಗಳೂರು, ಜೂ.16: ರಾಜಕೀಯವಾಗಿ ನಾನು ಯಾವುದೇ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ವೈಯಕ್ತಿಕ ಕೆಲಸದಿಂದ ಹೈದರಾಬಾದ್‍ಗೆ ಹೋಗಿದ್ದೆ. ಹೊಸದಿಲ್ಲಿಗೆ ಹೋಗಿರಲಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಬುಧವಾರ ನಗರದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ. ಎಲ್ಲ ಗೊಂದಲಗಳು ಪರಿಹಾರವಾಗಬಹುದು ಎಂದರು.
ಅರುಣ್ ಸಿಂಗ್ ಅವರ ಎದುರು ಎಲ್ಲ ವಿಚಾರಗಳನ್ನು ತಿಳಿಸುತ್ತೇನೆ. ನಾನು ಬಿಜೆಪಿಯ ಯಾವ ನಾಯಕರನ್ನು ಭೇಟಿಯಾಗಿಲ್ಲ. ಹವಾಮಾನ ವೈಪರಿತ್ಯದಿಂದ ವಿಮಾನ ಬರುವುದು ಒಂದು ಗಂಟೆ ತಡವಾಯಿತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Next Story





