ಶೀಘ್ರವೇ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ಪೂರೈಕೆ

ಹೊಸದಿಲ್ಲಿ,ಜೂ.16: ಶೀಘ್ರವೇ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆಗಳನ್ನು ಪೂರೈಸುವ ಪ್ರಸ್ತಾವವನ್ನು ಹೊಂದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಪೂರೈಕೆ ಮಾದರಿಯೊಂದನ್ನು ಅಭಿವೃದ್ಧಿಗೊಳಿಸಲು ಆಸಕ್ತ ಡ್ರೋನ್ ನಿರ್ವಾಹಕರನ್ನು ಆಹ್ವಾನಿಸಿದೆ.
ದೇಶದಲ್ಲಿಯ ದುರ್ಗಮ ಪ್ರದೇಶಗಳಿಗೆ ಲಸಿಕೆಗಳನ್ನು ಮತ್ತು ಔಷಧಿಗಳನ್ನು ಪೂರೈಸಲು ಡ್ರೋನ್ ಗಳನ್ನು ಬಳಸುವ ಸಾಧ್ಯತೆಯಿದೆ.
ಪೈಲಟ್ ಯೋಜನೆಯ ಮೂಲಕ ಪೂರೈಕೆ ಮಾದರಿಯನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಿದ್ದು,ರಾಜ್ಯ ಸರಕಾರಗಳು ಲಸಿಕೆಗಳ ಪೂರೈಕೆಯಾಗಿ ಇದನ್ನು ಅಳವಡಿಸಿಕೊಳ್ಳಬಹುದು. ಐಐಟಿ-ಕಾನ್ಪುರ ಸಹಭಾಗಿತ್ವದಲ್ಲಿ ಸಾಧ್ಯಾಸಾಧ್ಯತೆಯ ಅಧ್ಯಯನವನ್ನು ಈಗಾಗಲೇ ನಡೆಸಲಾಗಿದೆ ಎಂದು ಐಸಿಎಂಆರ್ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಾಂಡಾ ತಿಳಿಸಿದರು.
Next Story