ಪುದುಚೇರಿ: ಸ್ಪೀಕರ್ ಆಗಿ ನೇಮಕಗೊಂಡ ಬಿಜೆಪಿಯ ಆರ್. ಸೆಲ್ವಂ
ಪುದುಚೇರಿ, ಜೂ.17: ಬಿಜೆಪಿಯ ಶಾಸಕ ‘ಎಂಬಾಲಂ’ ಆರ್ ಸೆಲ್ವಂ ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಆಗಿ ಸೆಲ್ವಂ ಆಯ್ಕೆಯನ್ನು ಹಂಗಾಮಿ ಸ್ಪೀಕರ್ ಕೆ. ಲಕ್ಷ್ಮೀನಾರಾಯಣನ್ ಘೋಷಿಸಿದರು.
ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸೆಲ್ವಂ, ಪುದುಚೇರಿಯ ವಿಧಾನಸಭೆಯ 21ನೇ ಸ್ಪೀಕರ್ ಆಗಿದ್ದಾರೆ. ಸೆಲ್ವಂರನ್ನು ಮುಖ್ಯಮಂತ್ರಿ ಎನ್ ರಂಗಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್. ಶಿವ ಸ್ಪೀಕರ್ ಆಸನದತ್ತ ಕರೆದೊಯ್ದರು. ಪುದುಚೇರಿಯಲ್ಲಿ ಎಐಎನ್ಆರ್ಸಿ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಮೇ 7ರಂದು ರಂಗಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Next Story





