ಮೂವರು ಕಾರ್ಯಕರ್ತರಿಗೆ ಜಾಮೀನು ವಿರೋಧಿಸಿ ದಿಲ್ಲಿ ಪೊಲೀಸರ ಅರ್ಜಿಯನ್ನು ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

photo: thenewsminute
ನವದೆಹಲಿ: ವಿದ್ಯಾರ್ಥಿ-ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗಾನಾ ಕಲಿಟಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ನೀಡುವ ದಿಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ದಿಲ್ಲಿ ಪೊಲೀಸ್ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಪೌರತ್ವ ಕಾನೂನಿನ ಕುರಿತಾದಂತೆ ನಡೆದ ಪ್ರತಿಭಟನೆ ಮತ್ತು ಉದ್ವಿಗ್ನತೆಗಳ ನಡುವೆ ಭುಗಿಲೆದ್ದ ಗಲಭೆಗಳಲ್ಲಿನ ಸಂಪರ್ಕದ ಆರೋಪದ ಮೇರೆಗೆ ಕಳೆದ ಮೇ ತಿಂಗಳಲ್ಲಿ ಮೂವರನ್ನೂ ಬಂಧಿಸಲಾಗಿತ್ತು. ಮಂಗಳವಾರ 50,000ರೂ. ಹಾಗೂ ವೈಐಕ್ತಿಕ ಬಾಂಡ್ ಗಳ ಮೇಲೆ ಅವರಿಗೆ ಜಾಮೀನು ನೀಡಲಾಗಿತ್ತು.
ಬುಧವಾರ ಮಧ್ಯಾಹ್ನ 1 ಗಂಟೆಯೊಳಗಡೆ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ದಿಲ್ಲಿ ಪೊಲೀಸರು ಅವರನ್ನು ಇದುವರೆಗೂ ತಿಹಾರ್ ಜೈಲಿನಿಂದ ಹೊರಬರದಂತೆ ಅರ್ಜಿ ಸಲ್ಲಿಸಿದ್ದರಿಂದ ಆ ಗಡುವು ಗಣನೆಗೆ ಬರಲಿಲ್ಲ ಎನ್ನಲಾಗಿದೆ. ವಿಳಾಸಗಳನ್ನು ಮತ್ತು ಜಾಮೀನುಗಳನ್ನು ಪರಿಶೀಲನೆ ಮಾಡಲಿಕ್ಕಿದೆ ಎಂದು ಪೊಲೀಸರು ಬಿಡುಗಡೆ ವಿಳಂಬ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು.





