ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 50ನೇ ದಿನ ಊಟ ವಿತರಣೆ

ಮಂಗಳೂರು : ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಅವರ ನೇತೃತ್ವದಲ್ಲಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಊಟ ವಿತರಣೆಯು ಇಂದು ನಗರದ ನಿರ್ಗತಿಕರಿಗೆ, ಭಿಕ್ಷುಕರಿಗೆ ಹಾಗೂ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಸೇರಿದಂತೆ ಸುಮಾರು 600ಕ್ಕೂ ಅಧಿಕ ಮಂದಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಐಸಿಸಿ ವಕ್ತಾರರಾದ ಲಾವಣ್ಯ ಬಲ್ಲಾಳ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಜಿಲ್ಲಾ ಪ್ರ.ಕಾರ್ಯದರ್ಶಿ ಶಬೀರ್ ಎಸ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸರ್ಫರಾಜ್ ನವಾಝ್, ಆಶಿತ್ ಪಿರೇರಾ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಮೋಹನ್ ಶೆಟ್ಟಿ, ಆರಿಫ್ ಬಾವ, ರಮಾನಂದ ಪೂಜಾರಿ, ನಝೀರ್ ಬಜಾಲ್, ಮೊಹಮ್ಮದ್ ಬಪ್ಪಳಿಗೆ, ಯೂಸುಫ್ ಉಚ್ಚಿಲ್, ಅಬ್ದುಲ್ ಸಲೀಂ ಮಕ್ಕ, ಹಸನ್ ಡೀಲ್ಸ್, ಮೀನಾ ಟೆಲ್ಲೀಸ್, ಫಯಾಝ್ ಅಮ್ಮೆಮ್ಮಾರ್, ಶಾಫಿ ಕೈಕಂಬ, ಇಮ್ರಾನ್, ಅಲ್ಫಾಝ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.








.jpeg)



.jpeg)


