Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲಾಕ್‍ಡೌನ್ ಪರಿಣಾಮ: ಕೊಡಗಿನ ಕಿತ್ತಳೆಗೆ...

ಲಾಕ್‍ಡೌನ್ ಪರಿಣಾಮ: ಕೊಡಗಿನ ಕಿತ್ತಳೆಗೆ ಬೇಡಿಕೆ ಕುಸಿತ; ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ

ಎಸ್.ಕೆ. ಲಕ್ಷ್ಮೀಶ್ಎಸ್.ಕೆ. ಲಕ್ಷ್ಮೀಶ್17 Jun 2021 11:18 PM IST
share
ಲಾಕ್‍ಡೌನ್ ಪರಿಣಾಮ: ಕೊಡಗಿನ ಕಿತ್ತಳೆಗೆ ಬೇಡಿಕೆ ಕುಸಿತ; ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ

ಮಡಿಕೇರಿ, ಜೂ.17: ಕೋವಿಡ್ ಲಾಕ್‍ಡೌನ್ ಪರಿಣಾಮ ಕಳೆದ ಎರಡು ವರ್ಷಗಳಿಂದ ಕೊಡಗಿನ ಕಿತ್ತಳೆಗೆ ಬೇಡಿಕೆ ಕುಸಿದಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಫಸಲು ಬಂದಿದ್ದರೂ ಲಾಭ ಗಳಿಸಲಾಗದ ಪರಿಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ.

ಹುಳಿ-ಸಿಹಿ ಮಿಶ್ರಣ ರುಚಿಯ, ಬಾಯಲ್ಲಿ ನೀರೂರಿಸುವ ಕೊಡಗಿನ ಕಿತ್ತಳೆಗೆ ಈಗ ಫಸಲಿನ ಸಮಯ. ದೇಶ ವಿದೇಶಗಳ ಮಂದಿ “ಕೂರ್ಗ್ ಆರೆಂಜ್” ಎಂದಾಕ್ಷಣ ಬಾಯಲ್ಲಿ ನೀರು ಸುರಿಸುತ್ತಾರೆ. ಕೊಡಗಿನ ಮಣ್ಣಿನ ಗುಣಕ್ಕೆ ಹೊಂದಿಕೊಂಡಿರುವ ಕಿತ್ತಳೆ ಬ್ರಿಟೀಷರ ಕಾಲದಿಂದಲೂ ಹೆಸರುವಾಸಿ ಹಣ್ಣು. ಆಗಿನಿಂದಲೂ ಕೊಡಗಿನ ಕಿತ್ತಳೆ ಎಂದರೆ ಹೆಚ್ಚು ಬೇಡಿಕೆ. ಮೂರನೇ ಮುಖ್ಯ ಲಾಭದಾಯಕ ಬೆಳೆ ಎಂದು ಇದನ್ನು ಗುರುತಿಸಲಾಗಿದೆ. 

ಜಿಲ್ಲೆಯ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 30 ಸಾವಿರ ಮೆಟ್ರಿಕ್ ಟನ್ ಕಿತ್ತಳೆ ಬೆಳೆಯಲಾಗುತ್ತಿದೆ. ವ್ಯಾಪಾರಿಗಳು ಬೆಳೆಗಾರರಿಂದ ಒಂದು ಕೆಜಿ ಕಿತ್ತಳೆಗೆ 20 ರಿಂದ 25 ರೂ.ಗಳನ್ನಷ್ಟೇ ನೀಡಿ ಖರೀದಿಸುತ್ತಾರೆ. ವ್ಯಾಪಾರಿಗಳು ಒಂದು ಕೆಜಿ ಹಣ್ಣಿಗೆ ಗ್ರಾಹಕರಿಂದ 80 ರಿಂದ 120 ರೂ.ವರೆಗೆ ಪಡೆಯುತ್ತಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಫಸಲು ಬಿಟ್ಟಿದೆ, ಆದರೆ ಕೊಳ್ಳುವವರಿಲ್ಲದೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿದ್ದಾರೆ. ಇದರಿಂದ ಕೊಡಗಿನ ಬೆಳೆಗಾರರು ಲಕ್ಷಾಂತರ ರೂ.ನಷ್ಟ ಅನುಭವಿಸುತ್ತಿದ್ದಾರೆ. 

ಪ್ರತಿವರ್ಷ ಜಿಲ್ಲೆಗೆ ಬರುತ್ತಿದ್ದ ಲಕ್ಷಾಂತರ ಪ್ರವಾಸಿಗರು ಕಿತ್ತಳೆಯನ್ನು ಖರೀದಿಸಿ ಆಸ್ವಾದಿಸುತ್ತಿದ್ದರು. ವಿದೇಶಗಳಲ್ಲೂ ಎಲ್ಲಿಲ್ಲದ ಬೇಡಿಕೆ ಇದೆಯಾದರೂ ಕಳೆದ ಎರಡು ವರ್ಷಗಳ ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಕಿತ್ತಳೆಯನ್ನು ಕೇಳುವವರಿಲ್ಲ ಎನ್ನುವಂತಾಗಿದೆ.

ಇದು ಫಸಲು ಕೊಯ್ಲಿನ ಕಾಲವಾಗಿದ್ದು, ದಕ್ಷಿಣ ಕೊಡಗಿನ ಹಲವು ತೋಟಗಳಲ್ಲಿ ಯಥೇಚ್ಚವಾಗಿ ಕಿತ್ತಳೆ ಹಣ್ಣು ಕೈಬೀಸಿ ಕರೆಯುತ್ತಿದೆ. ಬಾಳೆಲೆ, ತಿತಿಮತಿ, ಕಾನೂರು, ಕುಟ್ಟ ಮತ್ತಿತರ ಊರುಗಳಲ್ಲಿ ಉತ್ತಮ ಗಾತ್ರದ ರಾಶಿ ರಾಶಿ ಕಿತ್ತಳೆ ಕಂಡು ಬರುತ್ತಿದೆ. 

ಎಲ್ಲವೂ ಸುಗಮವಾಗಿದ್ದಿದ್ದರೆ ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಲೋಡ್‍ಗಟ್ಟಲೆ ಕೊಡಗಿನ ಕಿತ್ತಳೆ ಈಗ ಸರಬರಾಜಾಗಬೇಕಾಗಿತ್ತು. ಅಲ್ಲದೆ ಮಾನ್‍ಸೂನ್ ಟೂರಿಸಂ ಪರಿಕಲ್ಪನೆಯಡಿ ದೇಶ, ವಿದೇಶಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರು ಖರೀದಿಸಬೇಕಾಗಿತ್ತು. ಆದರೆ ಕಿತ್ತಳೆ ಫಸಲು ಬರುವ ಸಂದರ್ಭದಲ್ಲೇ ಕೋವಿಡ್ ಮತ್ತು ಲಾಕ್‍ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತಿದೆ. ಕೇರಳ ಮಾರುಕಟ್ಟೆಯಲ್ಲಿ ಇಲ್ಲಿನ ಕಿತ್ತಳೆಗೆ ಹೆಚ್ಚು ಬೇಡಿಕೆ ಇದೆಯಾದರೂ ಗಡಿಗಳಲ್ಲಿ ವಾಹನಗಳ ಸಂಚಾರ, ಜನಸಂಚಾರ ಮತ್ತು ಪ್ರವಾಸೋದ್ಯಮವನ್ನು ಬಂದ್ ಮಾಡಿರುವುದರಿಂದ ಹಣ್ಣನ್ನು ಕೇಳುವವರೇ ಇಲ್ಲದಾಗಿದೆ.

ಕಿತ್ತಳೆ ವ್ಯಾಪಾರಕ್ಕೂ ಕೇರಳಕ್ಕೂ ಹಲವು ದಶಕಗಳ ನಂಟಿದೆ. ದಲ್ಲಾಳಿಗಳ ಮೊರೆ ಹೋಗದೆ ಬೆಳೆಗಾರರೇ ಕೇರಳಕ್ಕೆ ಹೋಗಿ ಕಿತ್ತಳೆ ವ್ಯಾಪಾರ ಕುದುರಿಸಿ ಬರುತ್ತಿದ್ದ ಒಂದು ಕಾಲವಿತ್ತು. ಆದರೆ ಇಂದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಜೂನ್ ತಿಂಗಳ ಆರಂಭದಿಂದಲೇ ಕೊಡಗಿನ ಕಿತ್ತಳೆ ಕೊಯ್ಲಿಗೆ ಬಂದಿದ್ದು, ಕಾರ್ಮಿಕರ ಕೊರತೆಯೂ ಎದುರಾಗಿರುವುದರಿಂದ ಹಣ್ಣುಗಳು ಮರಗಳಲ್ಲೇ ಇವೆ. ಹಲವು ತೋಟಗಳಲ್ಲಿ ಕಿತ್ತಳೆಯನ್ನು ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆದಾರರು ಹಣ್ಣುಗಳನ್ನು ಗ್ರೇಡಿಂಗ್ ರೂಪದಲ್ಲಿ ಬೇರ್ಪಡಿಸಿ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ಕಿತ್ತಳೆ ಹಣ್ಣಿನ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1942ರಲ್ಲಿ ಪಾಲಿಬೆಟ್ಟದಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.  ಕೃಷಿ ತಜ್ಞರ ಸಲಹೆಯಂತೆ 1947ರಲ್ಲಿ ಕಿತ್ತಳೆ ಕೃಷಿ ಸಂಶೋಧನೆಗೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ವ್ಯವಸ್ಥೆಯಡಿ ಪ್ರಾಯೋಗಿಕ ಕೇಂದ್ರವನ್ನು ತೆರೆಯಲಾಗಿದೆ. ನಂತರ ಗೋಣಿಕೊಪ್ಪದಲ್ಲೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಜಗತ್ತಿನ ವಿವಿಧ ಕಿತ್ತಳೆ ತಳಿಗಳನ್ನು ಸಂಗ್ರಹಿಸಿ ತಳಿ ಅಭಿವೃದ್ಧಿ ಪಡಿಸಲಾಯಿತು. ವಿವಿಧ ರೋಗ ಮತ್ತು ಕೀಟಬಾಧೆಗಳ ನಡುವೆ ಕೊಡಗಿನ ಕಿತ್ತಳೆ ಗಿಡಗಳು ಅವನತಿಯತ್ತ ಸಾಗಿತ್ತು. ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಕೈಜೋಡಿಸಿದ ಫಲವಾಗಿ ಎಲ್ಲೆಡೆ ಕಿತ್ತಳೆಗಿಡಗಳನ್ನು ಮತ್ತೊಮ್ಮೆ ಬೆಳೆಯಲು ಆರಂಭಿಸಲಾಯಿತು. ಪ್ರಸ್ತುತ ಕೊಡಗಿನ ಕಿತ್ತಳೆಯ ಭವಿಷ್ಯ ಉಜ್ವಲವಾಗಿದೆ.  

ಇಲ್ಲಿ ಬೇಡಿಕೆ ಕಡಿಮೆ
ಕೊಡಗಿನವರಿಗೆ “ಕೂರ್ಗ್ ಆರೆಂಜ್” ಎಂಬ ಹೆಮ್ಮೆ ಇದೆ, ಆದರೆ ಕೊಡಗಿನಲ್ಲಿ ಈ ಹಣ್ಣಿಗೆ ಬೇಡಿಕೆ ಕಡಿಮೆ. ಪ್ರವಾಸಿಗರು ಬಂದರಷ್ಟೇ ಉತ್ತಮ ವ್ಯಾಪಾರವಾಗುತ್ತದೆ. ಇಲ್ಲದಿದ್ದರೆ ಕೇರಳ ಮತ್ತಿತರ ರಾಜ್ಯಗಳ ಪಾಲಾಗುತ್ತದೆ. ಕೊಡಗಿನಲ್ಲಿ ಕಿತ್ತಳೆ ಸಹಕಾರ ಸಂಘವಿದ್ದು, ಕಿತ್ತಳೆಯನ್ನು ಖರೀದಿಸಿ ಹಲವು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯನ್ನು ಸೃಷ್ಟಿಸಿದೆಯಾದರೂ ನಿರೀಕ್ಷಿತ ಬೇಡಿಕೆ ಬಂದಿಲ್ಲ. ಹಾಫ್‍ಕಾಮ್ಸ್ ಕೂಡ ಗ್ರಾಹಕರ ಬೇಡಿಕೆಗನುಗುಣವಾಗಿ ಮಾತ್ರ ಕಿತ್ತಳೆಯನ್ನು ಖರೀದಿಸುತ್ತಿದೆ. ಜಿಲ್ಲೆಯಲ್ಲಿ ಕಿತ್ತಳೆಗೆ ನಿರ್ದಿಷ್ಟ ಮಾರುಕಟ್ಟೆ ಇಲ್ಲ ಎನ್ನುವ ಬೇಸರ ಬೆಳೆಗಾರರಿಗೂ ಇದೆ.

ಮಡಿಕೇರಿ ಸಮೀಪದ ಇಬ್ನಿವಳಮುಡಿ ಗ್ರಾಮದ ಮಾದರಿ ಬೆಳೆಗಾರ ಪೊನ್ನಚೆಟ್ಟಿರ ಸುರೇಶ್ ಸುಬ್ಬಯ್ಯ ಅವರು ತಮ್ಮ ತಂದೆಯ ಕಾಲದಿಂದಲೂ ಕಿತ್ತಳೆ ಬೆಳೆಗೆ ಒತ್ತು ನೀಡುತ್ತಾ ಬಂದಿದ್ದಾರೆ. ಕಾಲಕಾಲಕ್ಕೆ ಉತ್ತಮ ಪೋಷಕಾಂಶ, ಮಿತವಾದ ರಾಸಾಯನಿಕ ಗೊಬ್ಬರ ಅಗತ್ಯವಿದ್ದಾಗ ಔಷಧಿ ಸಿಂಪಡಣೆ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೊಡಗಿನ ಕಿತ್ತಳೆಯಿಂದಲೇ ಲಾಭ ಗಳಿಸುತ್ತಿರುವ ಇವರು ಹಲವು ವರ್ಷಗಳ ಹಿಂದೆ ಕೇರಳದ ಕ್ಯಾಲಿಕಟ್ಟಿನ ಮಾರುಕಟ್ಟೆಗೆ ನೇರವಾಗಿ ಕಿತ್ತಳೆಯನ್ನು ಒದಗಿಸುತ್ತಿದ್ದರು. ಆದರೆ ಈ ಬಾರಿ ತಾವು 12 ಎಕರೆ ಪ್ರದೇಶದಲ್ಲಿ ಬೆಳೆದ ಕಿತ್ತಳೆಯಿಂದ ಸುಮಾರು 6 ಲಕ್ಷ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ.

ಇದು ಕೊಡಗಿನ ಕಿತ್ತಳೆಯ ಕೊಯ್ಲಿನ ಸಮಯ, ಆದರೆ ಕೋವಿಡ್ ಪರಿಸ್ಥಿತಿಯಿಂದ ಕೊಂಚ ಕಷ್ಟವಾಗಿದೆ. ಆದರೆ ಕ್ರಮೇಣ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಬಹುದು.

-ಚಕ್ಕೆರ ಪ್ರಮೋದ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಮಡಿಕೇರಿ ತಾಲೂಕು

ಕೊಡಗಿನ ಕಿತ್ತಳೆಯನ್ನು ಈಗಲೂ ಎಲ್ಲರು ಬಯಸುತ್ತಾರೆ, ಆಸ್ವದಿಸುತ್ತಾರೆ. ಆದರೆ ಲಾಕ್‍ಡೌನ್ ಕಾರಣದಿಂದ ಬೇಡಿಕೆ ಕುಸಿದಿದೆ. ಮುಂದೆ ಕಿತ್ತಳೆ ಕೃಷಿಗೆ ಭವಿಷ್ಯವಿದೆ ಎನ್ನುವ ವಿಶ್ವಾಸವಿದೆ.

-ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಬೆಳೆಗಾರರು, ಇಬ್ಬನಿವಳವಾಡಿ ಗ್ರಾಮ

share
ಎಸ್.ಕೆ. ಲಕ್ಷ್ಮೀಶ್
ಎಸ್.ಕೆ. ಲಕ್ಷ್ಮೀಶ್
Next Story
X