ಇಬ್ರಾಹೀಂ ತಣ್ಣೀರುಬಾವಿ ಸ್ಮರಣಾರ್ಥ ಜೂ.20: ‘ಬ್ಯಾರಿ ಅರ್ಚೊ ಮಸಾಲೆ’ ಸಂಗೀತ ಕಾರ್ಯಕ್ರಮ
ಮಂಗಳೂರು, ಜೂ.18: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜ ದಿ.ಇಬ್ರಾಹಿಂ ತಣ್ಣೀರುಬಾವಿ ಅವರ ಸ್ಮರಣಾರ್ಥ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಜೂ.20ರಂದು ರಾತ್ರಿ 7ರಿಂದ 10ರವರೆಗೆ ‘ಬ್ಯಾರಿ ಅರ್ಚೊ ಮಸಾಲೆ 2021 ಸಂಗೀತ ಲೈವ್‌ಕಾರ್ಯಕ್ರಮವು ಅಕಾಡಮಿಯ ಯೂಟ್ಯೂಬ್ ಮತ್ತು ಫೇಸ್‌ಬುಕ್ ಚಾನೆಲ್ ಮೂಲಕ ಪ್ರಸಾರ ಮಾಡಲಿದೆ.
ಗಾಯಕರಾದ ಅನಿತಾ ಡಿಸೋಜ, ಮುಹಮ್ಮದ್ ಇಕ್ಬಾಲ್, ಹುಸೈನ್ ಕಾಟಿಪಳ್ಳ, ಅಶ್ರಫ್ ಅಪೊಲೊ, ಶರೀಫ್ ಪರ್ಲಿಯಾ, ಫೈಝ್ ಕಾಟಿಪಳ್ಳ ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
Next Story





