ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಿಲ್ಖಾ ಸಿಂಗ್

ಭಾರತದ ಪ್ರಸಿದ್ಧ ಓಟಗಾರ ಮಿಲ್ಖಾ ಸಿಂಗ್ ರವರಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆಕ್ಸಿಜನ್ ಮಟ್ಟವೂ ಕುಸಿಯುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬುಧವಾರ ಕೋವಿಡ್ ಪರೀಕ್ಷೆ ನಡೆಸಿದ ವೇಳೆ ನೆಗೆಟಿವ್ ವರದಿ ಬಂದಿದ್ದು, ಬಳಿಕ ಅವರನ್ನು ಸಾಮಾನ್ಯ ಐಸಿಯುವಿಗೆ ದಾಖಲಿಸಲಾಗಿದೆ. "91 ರ ಹರೆಯದ ಮಿಲ್ಖಾ ಸಿಂಗ್ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಜ್ವರದಿಂದ ಬಳಲುತ್ತಿದ್ದರು ಮತ್ತು ಅವರ ಆಮ್ಲಜನಕ ಮಟ್ಟವೂ ಕಡಿಮೆಯಾಗಿದೆ. ವೈದ್ಯರ ತಂಡವು ಅವರ ಮೇಲೆ ನಿಗಾ ವಹಿಸುತ್ತಿದೆ" ಎಂದು ಪಿಜಿಐಎಂಆರ್ ಮೂಲಗಳು ಶುಕ್ರವಾರ ತಿಳಿಸಿವೆ.
ಮಿಲ್ಖಾ ಸಿಂಗ್ ಹಾಗೂ ಅವರ ಪತ್ನಿ ನಿರ್ಮಲ್ ಕೌರ್ ಕಳೆದ ತಿಂಗಳು ಕೋವಿಡ್ ಪಾಸಿಟಿವ್ ಆಗಿದ್ದರು. ಮಿಲ್ಖಾ ಸಿಂಗ್ ಚೇತರಿಸಿಕೊಂಡಿದ್ದು, ಅವರ ಪತ್ನಿಯು ಮೊಹಾಲಿಯ ಆಸ್ಪತ್ರೆಯಲ್ಲಿ ರವಿವಾರ ನಿಧನರಾಗಿದ್ದರು.
Next Story