ಅಸಹಾಯಕ ವೃದ್ಧೆ ಹೊಸ ಬೆಳಕು ವೃದ್ಧಾಶ್ರಮಕ್ಕೆ ದಾಖಲು
ಉಡುಪಿ, ಜೂ.18: ನಿಟ್ಟೂರು ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಆಶ್ರಯ ಪಡೆದಿದ್ದ ಅಸಹಾಯಕ ವೃದ್ಧೆ ಸಂಕಿ(65) ಇವರನ್ನು ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಮೂಲಕ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ.
ಇವರು ಮೂಲತಃ ಪಡುಬಿದ್ರೆಯವರಾಗಿದ್ದು, ಪತಿ, ಮಕ್ಕಳ ಆಶ್ರಯವಿಲ್ಲದೆ ಬೀದಿಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. ಇವರನ್ನು ಸಮಾಜ ಸೇವಕ ವಿಶು ಶೆಟ್ಟಿ ಸಖಿ ಒನ್‌ಸ್ಟಾಪ್ ಸೆಂಟರ್‌ಗೆ ತಾತ್ಕಾಲಿಕವಾಗಿ ದಾಖಲಿಸಿದ್ದರು. ಇದೀಗ ವೃದ್ಧೆಗೆ ಆಶ್ರಯದ ಅವಶ್ಯಕತೆ ಇದ್ದಿದ್ದರಿಂದ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಗಣೇಶ್ ವೃದ್ಧೆಯನ್ನು ಮಣಿಪಾಲ ಸರಳೇಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
Next Story





