ಉಡುಪಿ: ಯುವಕ ನಾಪತ್ತೆ
ಉಡುಪಿ, ಜೂ.18: ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ಅಂಚೆಯ ಶ್ರೀ ಸತ್ಯನಿಧಿ ಹೆಸರಿನ ಮನೆಯಲ್ಲಿ ವಾಸವಿದ್ದ ವಾದಿರಾಜ ಗಾಣಿಗ (39) ಎಂಬುವವರು ನಾಪತ್ತೆಯಾಗಿದ್ದಾರೆ.
ಚಹರೆ: 5 ಅಡಿ 4 ಇಂಚು ಎತ್ತರವಿದ್ದು, ಕಪ್ಪು ಕೂದಲು, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕ್ರೀಂ ಕಲರ್ ಪ್ಯಾಂಟ್, ಕಪ್ಪು ಚುಕ್ಕಿಗಳಿರುವ ತುಂಬು ತೋಳಿನ ಬಿಳಿಬಣ್ಣದ ಶರ್ಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೋಲಿಸ್ ಠಾಣೆಯ ಸಹಾಯಕ ಪೋಲಿಸ್ ಉಪನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story