Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬಿಜೆಪಿ ತತ್ವ, ಸಿದ್ಧಾಂತದ ಆಧಾರದಲ್ಲಿ...

ಬಿಜೆಪಿ ತತ್ವ, ಸಿದ್ಧಾಂತದ ಆಧಾರದಲ್ಲಿ ಬೆಳೆದ ಪಕ್ಷ: ಸಿ.ಟಿ.ರವಿ

''ಪಕ್ಷವು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದೆ''

ವಾರ್ತಾಭಾರತಿವಾರ್ತಾಭಾರತಿ18 Jun 2021 8:55 PM IST
share
ಬಿಜೆಪಿ ತತ್ವ, ಸಿದ್ಧಾಂತದ ಆಧಾರದಲ್ಲಿ ಬೆಳೆದ ಪಕ್ಷ: ಸಿ.ಟಿ.ರವಿ

ಬೆಂಗಳೂರು, ಜೂ.18: ಭಾರತೀಯ ಜನತಾ ಪಕ್ಷವು ತತ್ವ ಹಾಗೂ ಸಿದ್ಧಾಂತದ ಆಧಾರದಲ್ಲಿ ಬೆಳೆದು ಬಂದ ಪಕ್ಷ. ಎಲ್ಲ ಮತ ಸಂಪ್ರದಾಯಗಳನ್ನೂ ಒಳಗೊಂಡ ಪಕ್ಷ ನಮ್ಮದು. ಪಕ್ಷಕ್ಕೆ ಮಠಾಧೀಶರ ಆಶೀರ್ವಾದ ಸದಾ ಇರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಶುಕ್ರವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟಿನ ಕಾರಣಕ್ಕೆ ಯಾರೂ ಕನಿಷ್ಠರಲ್ಲ. ಯಾರೂ ಶ್ರೇಷ್ಠರಾಗಲು ಸಾಧ್ಯವಿಲ್ಲ. ನಮ್ಮ ಬದುಕಿನ ರೀತಿಯ ಕಾರಣಕ್ಕೆ ನಮ್ಮ ಸಮಾಜ ವ್ಯವಸ್ಥೆ ನಮ್ಮನ್ನು ಆರಾಧಿಸುತ್ತದೆ ಎಂದರು.

ಪಕ್ಷಕ್ಕೆ ಒಬ್ಬೊಬ್ಬರೇ ಶಾಸಕ, ಸಂಸದ ಇದ್ದಾಗ ನನ್ನಂಥ ಸಾವಿರಾರು ಜನ ಪಕ್ಷದ ಧ್ಯೇಯ, ಸಿದ್ಧಾಂತಕ್ಕಾಗಿ ಮತ್ತು ಪಕ್ಷಕ್ಕಾಗಿ ದುಡಿದಿದ್ದಾರೆ. ಅಧಿಕಾರ ಸಿಕ್ಕಿದ ಬಳಿಕ ನಮ್ಮ ಹಿಂದೆ ಜಾತಿ ಬರುತ್ತದೆ. ಬೀದಿಯಲ್ಲಿ ಹೊಡೆದಾಟ ಮಾಡುವಾಗ, ಹೋರಾಟ ಮಾಡುವಾಗ ಮತ್ತು ಜೈಲಿಗೆ ಹೋಗುವ ವೇಳೆ ನಮ್ಮ ಜೊತೆಗಿದ್ದವರು ಕೇವಲ ಕಾರ್ಯಕರ್ತರು. ಹಾಗಾಗಿ ಕಾರ್ಯಕರ್ತರ ಆಶಯಕ್ಕೆ ತಕ್ಕಂತೆ ನಮ್ಮ ಪಕ್ಷವು ಎಲ್ಲ ಜಾತಿಯವರನ್ನು ಒಳಗೊಂಡು ಮುನ್ನಡೆಯುತ್ತದೆ ಎಂದು ಅವರು ಹೇಳಿದರು.

ರಾಜಕಾರಣದಲ್ಲಿ ಜಾತಿಯ ಪ್ರಭಾವ ಇರುತ್ತದೆ. ಆದರೆ, ಒಂದೇ ಜಾತಿಯಿಂದ ಚುನಾವಣೆ ಗೆಲ್ಲಲು ಅಸಾಧ್ಯ. ಭಾರತೀಯ ಸಮಾಜ ವ್ಯವಸ್ಥೆ ನೀತಿಯನ್ನು ಗುರುತಿಸಿದೆ. ರಾವಣ ಹುಟ್ಟಿನಿಂದ ಮಹಾ ಬ್ರಾಹ್ಮಣ. ಆದರೂ, ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಪೂಜೆಗೆ ಒಳಗೊಳ್ಳುವವನು ರಾವಣನನ್ನು ಹತ್ಯೆ ಮಾಡಿದ ಶ್ರೀರಾಮ ಎಂದು ಸಿ.ಟಿ.ರವಿ ವಿವರಿಸಿದರು.

ಪಕ್ಷದ ಬೆಳವಣಿಗೆಗೆ ನೂರಾರು ಜನ ವಿವಿಧ ಜಾತಿಯ, ಸಮುದಾಯಗಳ ಮಠಾಧೀಶರು ಬೆಂಬಲಿಸಿದ್ದಾರೆ. ನಾವು ಚುನಾವಣೆಯಲ್ಲಿ ಗೆಲ್ಲಲು ಅವರ ಆಶೀರ್ವಾದ, ಬೆಂಬಲ ಕಾರಣವಾಗಿದೆ. ಇದೇ ಕಾರಣಕ್ಕೆ ಪಕ್ಷದ 104 ಶಾಸಕರು ಗೆದ್ದಿದ್ದಾರೆ. ಮತ್ತೆ ನಡೆದ ಉಪ ಚುನಾವಣೆಯಲ್ಲೂ ಪಕ್ಷ ಗೆದ್ದು ಬಂದಿದೆ. ಇದಕ್ಕಾಗಿ ಆ ಎಲ್ಲಾ ಮಠಾಧಿಪತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಬೆಂಬಲ ಮತ್ತು ಆಶೀರ್ವಾದ ನಮ್ಮ ಪಕ್ಷಕ್ಕೆ ಬೇಕು. ಆದರೆ, ನಮ್ಮ ಪಕ್ಷಕ್ಕೆ ಜಾತಿ ಇಲ್ಲ, ಪಕ್ಷವು ಜಾತಿ ಕೇಂದ್ರಿತವಲ್ಲ. ಪಕ್ಷಕ್ಕೆ ಸಿದ್ಧಾಂತ ಇದೆ. ಆ ಸಿದ್ಧಾಂತದಿಂದ ಪಕ್ಷ ಬೆಳೆದಿದೆ ಎಂದು ಅವರು ತಿಳಿಸಿದರು.

ನಮ್ಮ ಪಕ್ಷವು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದೆ. ಪ್ರಧಾನ ಮಂತ್ರಿಯವರೂ “ಮೈ ನಹೀ ಖಾವೂಂಗಾ, ನ ಖಾನೆ ದೂಂಗಾ” ಎಂದಿದ್ದಾರೆ. ಅದೇ ವಿಚಾರಧಾರೆ ಪಕ್ಷದ್ದಾಗಿದೆ. ಆರೋಪಗಳು ಸಾಬೀತಾದಾಗ ಮಾತ್ರ ಅದು ಅಪರಾಧವಾಗುತ್ತದೆ. ಎಲ್ಲಾ ಆರೋಪಗಳೂ ಅಪರಾಧವಾಗಿರುವುದಿಲ್ಲ. ನನಗೆ ಪ್ರಾಥಮಿಕ ಮಾಹಿತಿಯೂ ಇಲ್ಲದೆ ಇಲ್ಲೇ ತೀರ್ಪು ನೀಡಲು ಅಸಾಧ್ಯ. ವಿಷಯದ ಅಧ್ಯಯನ ಮಾಡದೆ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಹಿತಾಸಕ್ತಿಯನ್ನು ಆಧರಿಸಿ, ಪಕ್ಷದ ಬೆಳವಣಿಗೆಯನ್ನೂ ಆಧರಿಸಿ ಆಗುಹೋಗುಗಳ ಬಗ್ಗೆ ಕೋರ್ ಕಮಿಟಿ ಚರ್ಚೆ ಮಾಡಲಿದೆ. ಪಕ್ಷ ಹಿತ ಮತ್ತು ರಾಜ್ಯದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಚರ್ಚೆ ನಡೆಸಲಿದ್ದೇವೆ. ಆದರೆ, ಎಲ್ಲಾ ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ಅಸಾಧ್ಯ ಎಂದು ಸಿ.ಟಿ.ರವಿ ತಿಳಿಸಿದರು.

ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಪಕ್ಷ ಸಲಹೆ ನೀಡಬಹುದೇ ಹೊರತು ಅಂತಿಮ ಅಧಿಕಾರ ಇರುವುದು ಮುಖ್ಯಮಂತ್ರಿಗಳಿಗೇ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X