ವಿವಾಹಿತೆ ಕಾಣೆ
ಮಂಗಳೂರು, ಜೂ.18: ಸೋಮೇಶ್ವರ ಸಮೀಪದ ಕುಂಪಲದ ನಿವಾಸಿ ಅಮಿತಾ ರಾವ್ (39) ಎಂಬಾಕೆ ಗುರುವಾರ ಸಂಜೆ 3 ಗಂಟೆಗೆ ಮನೆಯಿಂದ ನಾಪತ್ತೆಯಾದ ಬಗ್ಗೆ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುರುವಾರ ಸಂಜೆ ತನ್ನ ಮಗನ ಬಳಿ ತಾನು ಗೆಳತಿಯನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಹೋದ ಅಮಿತಾ ರಾವ್ ಮರಳಿ ಈವರೆಗೂ ಬಂದಿಲ್ಲ ಎಂದು ಆಕೆಯ ಪತಿ ಯಶವಂತ ರಾವ್ ಶುಕ್ರವಾರ ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದಾರೆ.
ಗೆಳತಿಯನ್ನು ಭೇಟಿ ಮಾಡಿ ಬರುವುದಾಗಿ ತಿಳಿಸಿ ಹೋದವಳು ತಡ ರಾತ್ರಿಯವರೆಗೂ ಮನೆಗೆ ಬಂದಿಲ್ಲ. ಬಳಿಕ ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿದೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋದ ಬಗ್ಗೆ ಮಾಹಿತಿ ಇಲ್ಲ ಎಂದು ಯಶವಂತ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
Next Story





