ವಿಶ್ವ ಯೋಗ ದಿನ : ವಿಶೇಷ ಅಂಚೆ ಚೀಟಿ ಬಿಡುಗಡೆ
ಉಡುಪಿ, ಜೂ.19: ಅಂಚೆ ಇಲಾಖೆಯು ವಿಶ್ವಯೋಗ ದಿನದ ಅಂಗವಾಗಿ ಜೂ.21ರ ಯೋಗದಿನದಂದು ವಿಶೇಷ ರೀತಿಯ ಅಂಚೆ ಚೀಟಿಯನ್ನು (ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್) ದೇಶದ 810 ಅಂಚೆ ಕಛೇರಿಗಳಲ್ಲಿ ಬಿಡುಗಡೆ ಮಾಡುತ್ತಿದೆ.
ಜಿಲ್ಲೆಯಲ್ಲೂ ಉಡುಪಿ ಪ್ರಧಾನ ಅಂಚೆ ಕಛೇರಿ, ಮಣಿಪಾಲ ಪ್ರಧಾನ ಅಂಚೆ ಕಛೇರಿ, ಕುಂದಾಪುರ ಪ್ರಧಾನ ಅಂಚೆಕಛೇರಿಯಲ್ಲಿ ಈ ಅಂಚೆ ಚೀಟಿಯು ಲಭ್ಯವಿರುತ್ತದೆ. ಆಸಕ್ತರು ಜೂನ್ 21ರಂದು ಇದನ್ನು ಪಡೆದು ಕೊಳ್ಳಬಹುದು ಎಂದು ಜಿಲ್ಲಾ ಅಂಚೆ ವಿಭಾಗದ ಅಧೀಕ್ಷಕ ನವೀನ್ ಚಂದರ್ ತಿಳಿಸಿದ್ದಾರೆ.
Next Story





