Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾನವರು ದ್ಯುತಿ ಸಂಶ್ಲೇಷಣೆ...

ಮಾನವರು ದ್ಯುತಿ ಸಂಶ್ಲೇಷಣೆ ಮಾಡುವಂತಿದ್ದರೆ...?

ಆರ್.ಬಿ.ಗುರುಬಸವರಾಜಆರ್.ಬಿ.ಗುರುಬಸವರಾಜ19 Jun 2021 6:40 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮಾನವರು ದ್ಯುತಿ ಸಂಶ್ಲೇಷಣೆ ಮಾಡುವಂತಿದ್ದರೆ...?

‘‘ನಾನೊಂದು ಮರ, ನನ್ನಿಂದ ನೀವು ಸಾಕಷ್ಟು ಉಪಯೋಗ ಪಡೆದುಕೊಳ್ಳುತ್ತೀರಿ. ನನ್ನ ನೆರಳಿನಲ್ಲಿ ನೀವೆಲ್ಲಾ ಕಾಲ ಕಳೆಯುತ್ತೀರಿ. ನನ್ನ ಹಣ್ಣುಗಳ ರುಚಿಯನ್ನು ಆಸ್ವಾದಿಸುತ್ತೀರಿ. ನಾನು ನಿಮಗೆ ಮಾತ್ರ ನೆರಳು ಕೊಡುವುದಿಲ್ಲ. ಬದಲಾಗಿ ನನ್ನಲ್ಲಿ ನೂರಾರು ಪ್ರಾಣಿ ಪಕ್ಷಿ ಕೀಟಗಳು ವಾಸವಾಗಿವೆ. ಇವರೆಲ್ಲರಿಗೂ ನಾನು ಆಶ್ರಯದಾತ. ನೀವೂ ಸೇರಿದಂತೆ ಸಕಲ ಪ್ರಾಣಿ ಪಕ್ಷಿಗಳ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ನೀಡುತ್ತೇನೆ, ನಿಮಗೆ ಬೇಕಾದ ಆಹಾರವನ್ನೂ ಸಹ ನೀಡುವೆ. ಆದರೂ ಮಾನವರಾದ ನೀವೆಲ್ಲ ನನ್ನನ್ನು ಕಡಿದು ನಿಮ್ಮ ಕೆಲಸಗಳಿಗೆ ಬಳಸಿಕೊಳ್ಳುವಿರಿ. ದಯವಿಟ್ಟು ನಿಮ್ಮಲ್ಲಿ ನನ್ನ ಮನವಿ. ನನ್ನನ್ನು ಕಡಿಯಬೇಡಿ, ಕಡಿಯಬೇಡಿ, ಕಡಿಯಬೇಡಿ’’ ಎನ್ನುತ್ತಾ ಜಗ್ಗು ಮಂಚದಿಂದ ದೊಪ್ಪೆಂದು ಕೆಳಗೆ ಬಿದ್ದ. ಜಗ್ಗು ಬಿದ್ದ ಸದ್ದು ಕೇಳಿ ಅಡುಗೆ ಮನೆಯಲ್ಲಿದ್ದ ತಾಯಿ ‘‘ಏನಾಯ್ತೋ’’ ಎಂದು ಅಲ್ಲಿಗೆ ದೌಡಾಯಿಸಿದಳು. ಕೆಳಕ್ಕೆ ಬಿದ್ದ ಜಗ್ಗು ತಡಬಡಿಸಿ ಎದ್ದು ನಿಂತು ಏನಾಯಿತು ಎಂದು ತಿಳಿಯಲು ಪ್ರಯತ್ನಿಸಿದ. ಅವನಿಗೂ ಏನಾಯಿತೆಂದು ಗೊತ್ತಾಗಲಿಲ್ಲ.

‘‘ಏನೋ ಅದು ಕಡಿಯಬೇಡಿ.. ಕಡಿಯಬೇಡಿ.. ಎಂದು ಒಂದೇ ಸಮನೆ ಕೂಗುತ್ತಿದ್ದೆ. ಯಾರಾದ್ರೂ ಬಂದಿದ್ರಾ ನಿನ್ನನ್ನು ಕಡಿಯಲು?’’ ಎಂದಳು ತಾಯಿ. ಥಟ್ಟನೆ ಜಗ್ಗುಗೆ ಕನಸಿನ ನೆನಪಾಯ್ತು. ‘‘ಅಯ್ಯೋ ಅಮ್ಮ ನನ್ನನ್ನು ಕಡಿಯಲು ಯಾರೂ ಬಂದಿಲ್ಲ. ನಿನ್ನೆ ಶಾಲೆಯಲ್ಲಿ ಟೀಚರ್ ಹೇಳಿಕೊಟ್ಟ ನಾಟಕದ ಮಾತುಗಳನ್ನು ಕನಸಿನಲ್ಲಿ ಹೇಳುತ್ತಿದ್ದೆ ಅನಿಸುತ್ತೆ. ಮರ ಕಡಿಯಬೇಡಿ ಎಂಬುದು ಆ ಮಾತಿನ ಕೊನೆ ವಾಕ್ಯ. ಅದನ್ನೇ ನಾನು ಕನಸಿನಲ್ಲಿ ಉಚ್ಛರಿಸುತ್ತಾ ಮಂಚದಿಂದ ಕೆಳಕ್ಕೆ ಬಿದ್ದೆ.’’ ‘‘ನಿನಗೇನೂ ಪೆಟ್ಟಾಗಿಲ್ಲ ತಾನೆ? ಬಾ ಮುಖ ತೊಳೆದುಕೊ, ಕುಡಿಯಲು ಹಾಲು ಕೊಡುವೆ’’ ಎನ್ನುತ್ತಾ ತಾಯಿ ಅಡುಗೆ ಕೋಣೆಗೆ ನಡೆದಳು. ಮುಖ ತೊಳೆದು ಹಾಲು ಕುಡಿಯುತ್ತಾ ‘‘ಅಮ್ಮಾ, ಮರಗಳಿಗಿದ್ದಂತೆ ಆಹಾರ ಮತ್ತು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ನಮಗೇಕಿಲ್ಲ?’’ ಎಂದ.

ಮಗನ ಪ್ರಶ್ನೆ ಕೇಳಿ ಒಮ್ಮೆಲೇ ಕಕ್ಕಾಬಿಕ್ಕಿಯಾದ ತಾಯಿ ‘‘ಇದರ ಬಗ್ಗೆ ನನಗೆ ಅಷ್ಟೊಂದು ತಿಳಿಯದು ಪುಟ್ಟ. ಅಲ್ಲಿ ನಿಮ್ಮ ತಾತ ಪೇಪರ್ ಓದುತ್ತಾ ಕೂತಿದ್ದಾರೆ. ಅವ್ರನ್ನ ಕೇಳಿದ್ರೆ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತೆ’’ ಎಂದಳು. ಹಾಲು ಕುಡಿದು ಅಲ್ಲಿಗೆ ಬಂದ ಜಗ್ಗು, ‘‘ತಾತ ಸಸ್ಯ ಅಥವಾ ಮರಗಳಂತೆ ನಾವೂ ಆಹಾರ ಉತ್ಪತ್ತಿ ಮಾಡಬಹುದೇ? ದ್ಯುತಿ ಸಂಶ್ಲೇಷಣೆ ಕ್ರಿಯೆ ನಮಗೆ ಸಾಧ್ಯವೇ?’’ ಎಂದ. ಮೊಮ್ಮಗನ ಪ್ರಶ್ನೆ ಕೇಳಿ ತಾತನಿಗೆ ಒಮ್ಮೆಲೆ ವಿರೋಧಾಭಾಸಗಳು ಉಂಟಾದವು. ತನ್ನ ಮೊಮ್ಮಗ ಪ್ರಶ್ನೆೆ ಕೇಳಲು ಹಿಂಜರಿಯುವುದಿಲ್ಲವಲ್ಲ ಎಂಬ ಖುಷಿ ಒಂದೆಡೆ. ಇಂತಹದ್ದೊಂದು ಗಾಢವಾದ ವಿಚಾರ ಅವನ ತಲೆಗೆ ಯಾಕೆ ಬಂತು ಎಂಬ ಅಚ್ಚರಿ ಉಂಟಾಯಿತು. ಏನೇ ಆಗಲಿ ತನ್ನ ಮೊಮ್ಮಗ ಇಂತಹ ಪ್ರಶ್ನೆ ಕೇಳುತ್ತಿದ್ದಾನೆ ಅಂದರೆ ಶಾಲೆಯಲ್ಲಿ ಶಿಕ್ಷಕರು ಪ್ರಶ್ನಿಸುವ ಮನೋಭಾವ ಬೆಳೆಸಿದ್ದಾರೆಂದು ಆಯಿತು. ಅದಕ್ಕೆ ಪಾಲಕರಾದ ನಾವೂ ಸಹ ಸಹಕಾರ ನೀಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡು ಮೊಮ್ಮಗನ ಪ್ರಶ್ನೆಗೆ ಉತ್ತರಿಸಲು ಮುಂದಾದರು.

ನಮ್ಮ ಭೂಮಿಯ ಮೇಲೆ ಸಸ್ಯಗಳು ಇರುವುದರಿಂದಲೇ ಭೂಮಿಯನ್ನು ಜೀವಂತ ಗ್ರಹ ಎನ್ನುತ್ತಾರೆ. ಒಂದುವೇಳೆ ಸಸ್ಯಗಳು ಇರದೇ ಇದ್ದರೆ ಭೂಗ್ರಹ ಬರಡಾಗಿರುತ್ತಿತ್ತು. ಸಸ್ಯಗಳು ಇಲ್ಲದೆ ಬಹುತೇಕ ಜೀವಿಗಳು ಬದುಕಲು ಸಾಧ್ಯವಿಲ್ಲ ಎಂಬುದು ನಮಗೆಲ್ಲಾ ಗೊತ್ತಾಗಿದೆ. ಅಂದರೆ ಇಡೀ ಭೂಗ್ರಹದ ಎಲ್ಲಾ ಜೀವಗಳಿಗೆ ಆಹಾರ ಉತ್ಪಾದಕರೆಂದರೆ ಸಸ್ಯಗಳು ಮಾತ್ರ. ಮಾನವರು ಸೇರಿದಂತೆ ಇತರ ಎಲ್ಲಾ ಪ್ರಾಣಿ ಪಕ್ಷಿಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಹಾರಕ್ಕಾಗಿ ಸಸ್ಯಗಳನ್ನೇ ಅವಲಂಬಿಸಿವೆ. ಏಕೆಂದರೆ ಆಹಾರ ಉತ್ಪಾದಿಸುವ ಸಾಮರ್ಥ್ಯ ಅವುಗಳಿಗೆ ಮಾತ್ರ ಇದೆ. ಸಸ್ಯಗಳು ಮಾತ್ರ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸಬಲ್ಲವು. ಇಂತಹ ಅಗಾಧ ಶಕ್ತಿ ಯಾವ ದೈತ್ಯ ಜೀವಿಗೂ ಇಲ್ಲ. ಈಗ ಮುಖ್ಯ ಪ್ರಶ್ನೆಗೆ ಬರೋಣ. ಮಾನವರಾದ ನಾವು ದ್ಯುತಿ ಸಂಶ್ಲೇಷಣೆ ಮಾಡಲು ಸಾಧ್ಯವೇ? ಎಂಬುದು. ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯಲು ಪ್ರಮುಖವಾಗಿ ಕೋಶಗಳಲ್ಲಿ ಪತ್ರಹರಿತ್ತು ಇರಬೇಕು. ಸಸ್ಯಗಳ ಎಲೆಗಳಲ್ಲಿರುವ ಈ ಪತ್ರಹರಿತ್ತುಗಳೇ ಎಲ್ಲಾ ಜೀವಿಗಳ ಅಡುಗೆ ಕೋಣೆ ಎನ್ನಬಹುದು. ಅಂತಹ ಶಕ್ತಿ ಮತ್ತು ಸಾಮರ್ಥ್ಯ ಸಸ್ಯಗಳ ಎಲೆಗಳಿಗೆ ಮಾತ್ರ ಇದೆ. ಒಂದು ವೇಳೆ ಮಾನವರೂ ಸಹ ದ್ಯುತಿಸಂಶ್ಲೇಷಣೆ ಮಾಡಲು ಸಾಧ್ಯವಾಗಿದ್ದರೆ ಇಡೀ ಭೂಗ್ರಹದ ತುಂಬಾ ಹಸಿರು ಕಾಣುತ್ತಿತ್ತು ಅಲ್ಲವೇ?. ಸಸ್ಯದ ಎಲೆಗಳಲ್ಲಿ ಪತ್ರಹರಿತ್ತು ಇದೆ. ಕ್ಸೈಲಂ ನಾಳಗಳು ಭೂಮಿಯಲ್ಲಿನ ನೀರು ಮತ್ತು ಲವಣಗಳನ್ನು ಹೀರಿಕೊಂಡು ಎಲೆಗಳಿಗೆ ಸಾಗಿಸುತ್ತವೆ. ಎಲೆಗಳು ವಾತಾವರಣದಿಂದ ಸೂರ್ಯನ ಬೆಳಕು ಹಾಗೂ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತವೆ. ಎಲೆಗಳಲ್ಲಿನ ಪತ್ರಹರಿತ್ತು ಈ ಎಲ್ಲಾ ಅಂಶಗಳನ್ನು ಬಳಸಿಕೊಂಡು ಆಹಾರ ತಯಾರಿಸುತ್ತವೆ. ಹೀಗೆ ತಯಾರಾದ ಆಹಾರವನ್ನು ಫ್ಲೋಯಂ ನಾಳಗಳು ಸಸ್ಯದ ಎಲ್ಲಾ ಭಾಗಗಳಿಗೆ ಸಾಗಿಸುತ್ತವೆ. ಆದರೆ ಮಾನವರಲ್ಲಿ ಪತ್ರಹರಿತ್ತು ಇಲ್ಲ. ಹಾಗಾಗಿ ಆಹಾರ ತಯಾರಿಸಲು ಆಗುವುದಿಲ್ಲ.

ಒಂದು ದಿನದಲ್ಲಿ ಉತ್ತಮ ಬೆಳಕು ಮರವೊಂದಕ್ಕೆ 200 ಕ್ಯಾಲೋರಿ ಶಕ್ತಿ ನೀಡುತ್ತದೆ. ಆದರೆ ಒಬ್ಬ ಆರೋಗ್ಯವಂತ ಮಾನವ ಬದುಕಲು 2,000 ಕ್ಯಾಲೋರಿ ಶಕ್ತಿ ಬೇಕಾಗುತ್ತದೆ. ಸಸ್ಯಗಳು ನೈಸರ್ಗಿಕವಾಗಿ ಪರಿಸರ ಸ್ನೇಹಿಯಾಗಿದ್ದರೂ, ಅವು ಪಡೆಯುವ ಸೂರ್ಯನ ಬೆಳಕಿನಲ್ಲಿ ಕೇವಲ ಶೇ. 5-10 ರಷ್ಟು ಮಾತ್ರ ಶಕ್ತಿಯಾಗಿ ಪರಿವರ್ತಿಸುತ್ತವೆ. ಒಂದುವೇಳೆ ಮಾನವರು ದ್ಯುತಿಸಂಶ್ಲೇಷಣೆ ಮಾಡುವಂತಿದ್ದರೆ ಸಾಕಷ್ಟು ಬೆಳಕನ್ನು ಹೀರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು ಪರಿವರ್ತಿಸಬಹುದಿತ್ತು. ಮಾನವರಾದ ನಾವು ದ್ಯುತಿಸಂಶ್ಲೇಷಣೆ ಮಾಡುವಂತಿದ್ದರೆ ದಿನವಿಡೀ ಪ್ರಖರವಾದ ಬಿಸಿನಲ್ಲಿಯೇ ಕಾಲ ಕಳೆಯಬೇಕಾಗುತ್ತಿತ್ತು. ದ್ಯುತಿಸಂಶ್ಲೇಷಣೆ ಕ್ರಿಯಗೆ ಬೇಕಾದ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳಲು ಚರ್ಮದಲ್ಲಿ ಪತ್ರರಂಧ್ರಗಳು ಬೇಕಾಗುತ್ತಿದ್ದವು. ಆಗ ನಾವೂ ಸಹ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕ ಉತ್ಪತ್ತಿ ಮಾಡಬಹುದಿತ್ತು. ವಾತಾವರಣಕ್ಕೆ ಉತ್ತಮ ಗಾಳಿಯನ್ನು ಕೊಡಬಹುದಿತ್ತು.

ಮಾನವರೂ ಸಹ ದ್ಯುತಿ ಸಂಶ್ಲೇಷಣೆ ಮಾಡುವಂತಿದ್ದರೆ ಓರೆನ್ ಪದರ ಹಾನಿಯಾಗುತ್ತಿ ರಲಿಲ್ಲ. ಅಲ್ಲದೆ ಕೃಷಿ ಉತ್ಪಾದನೆಯ ಪ್ರಮಾಣವೂ ಹೆಚ್ಚುತ್ತಿತ್ತು. ಎಲ್ಲಾ ಜೀವಿಗಳಿಗೂ ಆಹಾರ ಲಭ್ಯವಾಗುತ್ತಿತ್ತು. ಯಾರೂ ಸಹ ಆಹಾರದ ಕೊರತೆಯಿಂದ ಸಾಯುತ್ತಿರಲಿಲ್ಲ. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಮಾನವರು ದ್ಯುತಿ ಸಂಶ್ಲೇಷಣೆ ಕ್ರಿಯೆ ಮಾಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಜೈವಿಕ ತಂತ್ರಜ್ಞಾನದ ಸಹಾಯದಿಂದ ಇಂತಹ ಒಂದು ಪ್ರಕ್ರಿಯೆ ಅಭಿವೃದ್ಧಿ ಹೊಂದಿದರೂ ಅಚ್ಚರಿಯೇನಿಲ್ಲ ಅಲ್ಲವೇ?

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಆರ್.ಬಿ.ಗುರುಬಸವರಾಜ
ಆರ್.ಬಿ.ಗುರುಬಸವರಾಜ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X