ಎಸೆಸ್ಸೆಫ್ ವತಿಯಿಂದ ಮಖ್ದೂಮಿಯ ಸಮ್ಮಿಟ್
ಮಂಗಳೂರು, ಜೂ.20: ಎಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ನ ಅಧೀನದಲ್ಲಿರುವ ದಅ್ವಾ ಸಮಿತಿಯು ಮುತಅಲ್ಲಿಮರಿಗಾಗಿ ಆನ್‌ಲೈನ್ ಮೂಲಕ ಇತ್ತೀಚೆಗೆ ಆಯೋಜಿಸಲಾದ ‘ಮಖ್ದೂಮಿಯ ಸಮ್ಮಿಟ್’ ಕಾರ್ಯಕ್ರಮವು ಜಿಲ್ಲಾಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲರ ಅಧ್ಯಕ್ಷತೆಯಲ್ಲಿ ಸಮಾಪ್ತಿಗೊಂಡಿತು.
ಸುಮಾರು 200 ಮುತಅಲ್ಲಿಮರು ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮವನ್ನು ಎಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ ಮೂಡಬಿದ್ರೆ, ಎಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ, ಎಸೆಸ್ಸೆಫ್ ಕರ್ನಾಟಕ ರಾಜ್ಯ ದಅ್ವಾ ಕಾರ್ಯದರ್ಶಿ ಕೆಎಂ ಮುಸ್ತಫಾ ನಈಮಿ ಸಖಾಫಿ ಕ್ರಮವಾಗಿ ಉದ್ಘಾಟಿಸಿದರು.
ಎಸೆಸ್ಸೆಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ನಈಮಿ ಕೊಲ್ಲಂ ‘ಮುತಅಲ್ಲಿಂ: ಇಮಾಂ ಗಝ್ಝೆಲಿ (ರ) ಕಂಡಂತೆ’ ಎಂಬ ವಿಷಯದಲ್ಲಿ, ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ‘ವಿದ್ವಾಂಸ ಬದುಕು’ ಎಂಬ ವಿಷಯದಲ್ಲಿ ಕೊಳತ್ತೂರು ಇರ್ಶಾದಿಯ್ಯಃ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲವಿ ಸಖಾಫಿ ಕೊಳತ್ತೂರು ‘ಮುತಅಲ್ಲಿಂ ಮತ್ತು ಸಂಘಟನೆ’ ಎಂಬ ವಿಷಯದಲ್ಲಿ ತರಗತಿ ನೀಡಿದರು.
ಮುನೀರ್ ಅಹ್ಮದ್ ಸಖಾಫಿ ಅಧ್ಯಕ್ಷೀಯ ಭಾಷಣ ಮಾಡಿದರು. ಅತಿಥಿಗಳಾಗಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಕೃಷ್ಣಾಪುರ, ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ ಭಾಗವಹಿಸಿದ್ದರು.
ಎಸೆಸ್ಸೆಫ್ ಜಿಲ್ಲಾ ದಅ್ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಸ್ವಾಗತಿಸಿದರು. ಜಿಲ್ಲಾ ದಅ್ವಾ ಕನ್ವೀನರ್ ಫಾರೂಕ್ ಸಖಾಫಿ ಕಾಟಿಪಳ್ಳ ವಂದಿಸಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ ಸಹಕರಿಸಿದರು.







