Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೋವಿಡ್ ನಂತರ ಶೈಕ್ಷಣಿಕ ಸಮಸ್ಯೆಗಳು...

ಕೋವಿಡ್ ನಂತರ ಶೈಕ್ಷಣಿಕ ಸಮಸ್ಯೆಗಳು ದುಪ್ಪಟ್ಟಾಗಿವೆ: ಡಾ.ಪಿ.ವಿ.ನಿರಂಜನಾರಾಧ್ಯ

'ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು' ವೆಬಿನಾರ್

ವಾರ್ತಾಭಾರತಿವಾರ್ತಾಭಾರತಿ20 Jun 2021 10:13 PM IST
share
ಕೋವಿಡ್ ನಂತರ ಶೈಕ್ಷಣಿಕ ಸಮಸ್ಯೆಗಳು ದುಪ್ಪಟ್ಟಾಗಿವೆ: ಡಾ.ಪಿ.ವಿ.ನಿರಂಜನಾರಾಧ್ಯ

ಬೆಳಗಾವಿ, ಜೂ. 20: `ಕೋವಿಡ್‍ನಿಂದ ಮಾತ್ರ ಶೈಕ್ಷಣಿಕ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಬದಲಿಗೆ, ಕೋವಿಡ್ ಪೂರ್ವದಲ್ಲೇ ಸಾಕಷ್ಟು ಸಮಸ್ಯೆಗಳು ಪ್ರಾಥಮಿಕ ಮತ್ತು ಪ್ರೌಢ ಶೈಕ್ಷಣಿಕ ವಲಯದಲ್ಲಿದ್ದವು. ಇದೀಗ ಕೋವಿಡ್‍ನಂತರ ಕಾಲಘಟ್ಟದಲ್ಲಿ ಅವು ದುಪ್ಪಟ್ಟಾಗಿವೆ' ಎಂದು ರಾಷ್ಟ್ರೀಯ ಕಾನೂನು ಶಾಲೆಯ ಶಿಕ್ಷಣ ತಜ್ಞ ಡಾ.ಪಿ.ವಿ.ನಿರಂಜನಾರಾಧ್ಯ ತಿಳಿಸಿದ್ದಾರೆ.

ರವಿವಾರ `ಮಾನವ ಬಂಧುತ್ವ ವೇದಿಕೆ' ವತಿಯಿಂದ ನಡೆಯುತ್ತಿರುವ 10 ದಿನಗಳ ವೆಬಿನಾರ್ ಸರಣಿಯ 10ನೆ ದಿನದ `ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು' ವಿಷಯ ಮಂಡಿಸಿ ಮಾತಾಡಿದ ಅವರು, `ಶಿಕ್ಷಣದಲ್ಲಿ ದೊಡ್ಡ ಮಟ್ಟದ ಅಸಮಾನತೆ. ಶಿಕ್ಷಣ ಸಾಮಾಜಿಕ ನ್ಯಾಯದ ಬಹುದೊಡ್ಡ ಅಸ್ತ್ರವಾಗಬೇಕು ಎಂಬ ಆಶಯವನ್ನು ಸಂವಿಧಾನದ ಅಡಿಯಲ್ಲಿ ಹೊಂದಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಶೈಕ್ಷಣಿಕ ಪಠ್ಯಕ್ರಮದಲ್ಲೇ ದೊಡ್ಡ ಅಸಮಾನತೆ ಇದೆ. ಶಿಕ್ಷಣದಲ್ಲಿ 7-8 ಬಗೆಯ ಶಾಲೆಗಳನ್ನ ಕಟ್ಟಲಾಗಿದೆ. ಉದಾಹರಣೆಗೆ ಅಂತರ್ ರಾಷ್ಟ್ರೀಯ ಶಾಲೆಗಳು, ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳು, ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಚೋಟಾಮೋಟಾ ಶಾಲೆಗಳು, ಮೀಡಿಯೋಕರ್ ಶಾಲೆಗಳು, ಸರಕಾರಿ ಶಾಲೆಗಳು ಇತ್ಯಾದಿ ಶಾಲೆಗಳನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಒಂದು ರೀತಿಯಲ್ಲಿ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೇವೆ ಎಂದು ಅವರು ದೂರಿದರು.

ಲಿಂಗ ಅಸಮಾನತೆ ಹೊಸ ಸ್ವರೂಪವನ್ನು ಪಡೆಯುತ್ತಿದೆ. ಹೆಣ್ಣುಮಕ್ಕಳನ್ನು ಮತ್ತು ಗಂಡು ಮಕ್ಕಳನ್ನು ಬೇರೆಬೇರೆ ಶಾಲೆಗಳಲ್ಲಿ ಓದಿಸಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ 8 ಅಂಶಗಳ ಮೂಲ ಸೌಕರ್ಯವನ್ನು ಪಡೆಯುವ ನಿಟ್ಟಿನಲ್ಲಿ ಅಸಮಾನತೆ ಇದೆ. ಶಿಕ್ಷಣ ಕ್ಷೇತ್ರದ ಹೂಡಿಕೆಯಲ್ಲಿ ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಕಡಿಮೆಮಾಡುತ್ತಿವೆ. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಕೋವಿಡ್ ಮುನ್ನ ಬಿಕ್ಕಟ್ಟನ್ನು ಸೃಷ್ಟಿಸಿದ್ದವು. ಕೊರೋನ ನಂತರ ಇವುದೊಡ್ಡ ಮಟ್ಟದಲ್ಲಿ ಉಲ್ಬಣವಾದವು' ಎಂದು ನಿರಂಜನಾರಾಧ್ಯ ತಿಳಿಸಿದರು.

ಸರಕಾರಿ ಶಾಲೆಗಳು ಕೇವಲ ಕಲಿಕೆ ಕೇಂದ್ರಗಳಾಗಿರಲಿಲ್ಲ. ಜೊತೆಗೆ, ಮಕ್ಕಳಿಗೆ ಪೌಷ್ಠಿಕಾಂಶ, ಬಿಸಿಯೂಟ, ಆಹಾರ, ಮಾತ್ರೆಗಳು, ಆರೋಗ್ಯ ತಪಾಸಣೆ ಮತ್ತು ಕೆಳಸ್ತರದ, ಅವಕಾಶ ವಂಚಿತ ಮಕ್ಕಳಿಗೆ ಇದ್ದ ಕ್ರೀಡೆ ಆಟ ಪಾಠಗಳ ಒಡನಾಟದ ಕೊರತೆಯನ್ನ ನೀಗಿಸುತ್ತಿತ್ತು. ಜೊತೆಗೆ, ಮಕ್ಕಳಿಗೆ ಹಲವು ಅವಘಡಗಳಿಂದ ರಕ್ಷಣೆ ಕೊಡಲಾಗುತ್ತಿತ್ತು. ಜೊತೆಗೆ ಕಲಿಕೆ ಭಾಗವಾಗಿತ್ತು. ಸರಕಾರಿ ಶಾಲೆ ಭೌತಿಕ, ಮಾನಸಿಕ ಮತ್ತು ಎಲ್ಲ ಬಗೆಯ ಬೆಳವಣಿಗೆಗಳಿಗೆ ಮುಖ್ಯವಾದ ಕೇಂದ್ರಸ್ಥಾನವಾಗಿತ್ತು ಎಂದು ಅವರು ಹೇಳಿದರು.

ಕೋವಿಡ್ ಭಾಗವಾಗಿ ಕೇಂದ್ರ ಸರಕಾರ ಮಾ.14ರಂದು ಏಕಾಏಕಿ ಲಾಕ್‍ಡೌನ್ ಘೋಷಿಸಿತ್ತು. ಲಾಕ್‍ಡೌನ್‍ನಿಂದಾಗಿ ಸುಮಾರು 75 ಸಾವಿರ ಶಾಲೆಗಳಲ್ಲಿ 1 ಕೋಟಿ 10 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದರು. ಸರಕಾರಿ ಶಾಲೆಗಳಲ್ಲಿ ದಾಖಲೀಕರಣವನ್ನು ಗಮನಿಸಿದರೆ ಒಬಿಸಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆನ್‍ಲೈನ್ ಶಿಕ್ಷಣದಲ್ಲಿ ದೊಡ್ಡ ಡಿಜಿಟಲ್ ಉದ್ಯಮದ ಲಾಬಿ ಇದೆ. ಆನ್‍ಲೈನ್ ಶಿಕ್ಷಣ ತರಗತಿ ಕಲಿಕೆಗೆ ಎಂದಿಗೂ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ನಿರಂಜನಾರಾಧ್ಯ ಪ್ರತಿಪಾದಿಸಿದರು.

ಶಿಕ್ಷಣದ ಉದ್ದೇಶ ಸಾಮಾಜೀಕರಣ. ಪರಸ್ಪರ ನಾವು ನಮ್ಮನ್ನು ಅರ್ಥಮಾಡಿಕೊಳ್ಳುವ ಮೂಲಕ ಸಂವಿಧಾನದ ಮೂಲ ಆಶಯವಾದ ಸಮಾನತೆಯೆಡೆಗೆ ಸಾಗಬೇಕಾಗಿರುವುದು ಶಿಕ್ಷಣದ ಮೂಲ ಉದ್ದೇಶ. ಆದರೆ ಆನ್‍ಲೈನ್ ಶಿಕ್ಷಣದಿಂದ ಇದು ಸಾಧ್ಯವಾಗದು. ಶಾಲೆಗಳಲ್ಲಿ ಎಲ್ಲ ಜಾತಿ, ವರ್ಗ, ಲಿಂಗದವರು ಸೇರಿ ಊಟ, ಆಟಪಾಠ, ಜಗಳ ಆಡಬೇಕು. ಆನ್‍ಲೈನ್ ಶಿಕ್ಷಣ ಸಣ್ಣ ಪರಿಹಾರವೇ ಹೊರತು, ಅದುವೇ ಪರ್ಯಾಯವಲ್ಲ. ಅದರ ಹಿಂದೆ ದೊಡ್ಡ ಪಿತೂರಿ ಇದೆ. ಬಹುತೇಕ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಹುನ್ನಾರವಿದೆ ಎಂದು ಅವರು ಆರೋಪಿಸಿದರು.

15 ತಿಂಗಳು ಶಾಲೆಗಳನ್ನು ಮುಚ್ಚಿದ್ದರಿಂದ ಪೌಷ್ಠಿಕತೆಯ ಸಮಸ್ಯೆ ಸೃಷ್ಟಿಯಾಗಿದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಒದಗಿಸುವ ಆಹಾರ ಮೂಲಭೂತ ಆಹಾರವಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಬಿಸಿಹಾಲು, ಬಿಸಿಯೂಟ ಸೇವಿಸುತ್ತಿದ್ದರು. ಆದರೆ ಶಾಲೆ ಬಂದ್ ಆದ ನಂತರ ಪೌಷ್ಠಿಕತೆಯ ಕೊರತೆಯ ಯಾತನೆಯನ್ನು ಅನುಭವಿಸಬೇಕಾಯಿತು. ಸರಕಾರ ಆಹಾರ ಧಾನ್ಯಗಳನ್ನು ಕೊಟ್ಟಿದೆ. ಆದರೆ, ಬಿಸಿಯೂಟ ಕೊಟ್ಟಂತೆ ಆಗುವುದಿಲ್ಲ. ಬಿಸಿಯೂಟ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಜಾರಿಗೆ ಬಂದಿದ್ದು, ಪೌಷ್ಠಿಕಾಂಶವನ್ನು ನೀಡಬೇಕೆಂದು ಜಾರಿಯಾಗಿದ್ದು ಎಂದು ಅವರು ತಿಳಿಸಿದರು.

ಮಕ್ಕಳು ಬಾಲ್ಯವನ್ನು ಅನುಭವಿಸಲು ಇದ್ದ ಜಾಗ ಶಾಲೆ. ನಗರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ವತಂತ್ರ, ಸಲಿಗೆಯಿಂದ ವಿಕಾಸ ಕಂಡುಕೊಳ್ಳಲು ಇದ್ದ ಜಾಗ ಶಾಲೆ. ನನ್ನ ಜೀವನದಲ್ಲಿ ಇಂದಿಗೂ ಅದ್ಭುತವಾಗಿ ನೆನಪಿರುವುದು ಶಾಲಾ ದಿನಗಳು. ಆ ಸಂದರ್ಭದಲ್ಲಿ ನಮ್ಮ ಆಟಪಾಠ, ಸ್ನೇಹ ಇತ್ಯಾದಿಗಳು ನಮ್ಮನ್ನು ರೂಪಿಸುವ ಪ್ರಮುಖ ಘಟ್ಟ. ಅದಕ್ಕಾಗಿಯೇ ಬಾಲ್ಯ ಮುಖ್ಯ ಎಂದು ಅವರು ನುಡಿದರು.

ಕೋವಿಡ್ ಅವಧಿ ಮಕ್ಕಳಿಗೆ ದೊಡ್ಡ ನಷ್ಟವಾಯಿತು. ಇದರಿಂದ ಸಹಪಾಠಿಗಳಿಲ್ಲದೆ ಮಕ್ಕಳು ಮನೆಯಲ್ಲೇ ಕಳೆಯಬೇಕಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಅಂತರವಿದೆ. ಒಂದೇ ಮನೆಯಲ್ಲಿ 15 ಜನರ ವರೆಗೆ ಇರುತ್ತಾರೆ. ಇದರಿಂದಾಗಿ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಆಯಿತು. ಕೂಲಿಕಾರರು, ದಿನಗೂಲಿಗಳು, ವಲಸೆ ಕಾರ್ಮಿಕರ ಮೇಲೆ ಒತ್ತಡ ಬಿತ್ತು. ದಶಕಗಳಿಂದ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಲು ನಡೆಸಿದ ಯತ್ನಕ್ಕೆ ಕಳೆದ 15 ತಿಂಗಳಲ್ಲಿ ಮತ್ತೆ ಹಿನ್ನಡೆ ಎದುರಾಯಿತು. ಮಕ್ಕಳು ಬಾಲ ಕಾರ್ಮಿಕರಾದರು. ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಜಾಸ್ತಿಯಾಯಿತು ಎಂದು ವಿವರಣೆ ನೀಡಿದರು.

ಬಾಲ್ಯ ವಿವಾಹಗಳು ದೊಡ್ಡ ಮಟ್ಟದಲ್ಲಿ ನಡೆದವು. 1 ತಿಂಗಳಲ್ಲಿ 250 ಬಾಲ್ಯವಿವಾಹ ನಡೆದವು. ಬಾಲಕರ ಕಳ್ಳಸಾಗಣೆ, ಭಿಕ್ಷೆಗೆ ಹಚ್ಚಿದ್ದನ್ನು ನೋಡಬಹುದು. ಮಾನಸಿಕ, ಲೈಂಗಿಕ ದೌರ್ಜನ್ಯದ ಪ್ರಮಾಣ ಹೆಚ್ಚಾದವು. ಎಲ್ಲ ಸಂಕಷ್ಟಗಳು 2-3 ಪಟ್ಟು ಹೆಚ್ಚಿದವು. ಶೇ.80ರಷ್ಟು ಮಕ್ಕಳು ಕಲಿಕೆಯಿಂದ ವಂಚಿತರಾದರು. ವಿದ್ಯಾಗಮವನ್ನು ಒಂದೂವರೆ ತಿಂಗಳು ನಡೆಸಲು ಸಾಧ್ಯವಾಗಲಿಲ್ಲ' ಎಂದು ನಿರಂಜನಾರಾಧ್ಯ ಮಾಹಿತಿ ನೀಡಿದರು.

ಯುನಿಸೆಫ್, ಯುನೆಸ್ಕೊ ಪ್ರಕಾರ ಶೇ.30ರಷ್ಟು ಮಕ್ಕಳು ಶಾಲೆಗಳಿಗೆ ತೆರಳುವ ಸಾಧ್ಯತೆ ಬಹಳ ಕಡಿಮೆ ಎಂದಿವೆ. ಇದಕ್ಕೆ ಪರಿಹಾರವೇನು? ಎಂಬುದು ಬಿಕ್ಕಟ್ಟು. ಪೌಷ್ಠಿಕಾಂಶ, ಕಲಿಕೆ, ಮಾನಸಿಕ ಆರೋಗ್ಯ, ಸಂತಸದ ಬಾಲ್ಯದ ದೃಷ್ಟಿಯಿಂದ ನಾವು ಕಂಡುಕೊಳ್ಳಬೇಕಾದ ಪರಿಹಾರವೆಂದರೆ ಶೀಘ್ರದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯಬೇಕು. ಆದರೆ, ಶಾಲೆ ತೆರೆದರೆ ಮಕ್ಕಳಿಗೆ ಕೊರೋನ ಬರುತ್ತದೆ ಎಂಬ ಅಂಶಗಳು ಚರ್ಚೆಗೆ ಬರುತ್ತವೆ. ಆದರೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲದೆ ಭಯ ಹುಟ್ಟಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ' ಎಂದು ಅವರು ಟೀಕಿಸಿದರು.

`ಲ್ಯಾನ್ಸೆಟ್ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಜೂನ್ 2020ರ ವರದಿಯಲ್ಲಿ ಮಕ್ಕಳಿಗೆ ಕೊರೋನ ಬಾಧಿಸಬಹುದು ಎಂಬುದಕ್ಕೆ ಯಾವುದೇ ರೀತಿಯ ಪುರಾವೆಗಳು ಇಲ್ಲ. ಮತ್ತು ಈ ವಿಷಯದ ಬಗ್ಗೆ ಯಾವುದೇ ತೀರ್ಮಾನವನ್ನು ಹೇಳಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಕರಾರುವಕ್ಕಾಗಿ ಹೇಳಿದೆ. ಆದುದರಿಂದ, ವೈಜ್ಞಾನಿಕ ಸುರಕ್ಷತಾ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಮತ್ತು ಶುಚಿತ್ವ ಕಾಪಾಡಿಕೊಳ್ಳುವುದರ ಮೂಲಕ ಶಾಲೆಗಳನ್ನು ಪ್ರಾರಂಭಿಸಬೇಕು' ಎಂದು ಅವರು ಆಗ್ರಹಿಸಿದರು.

ಸರಕಾರಿ ಶಾಲೆಗಳನ್ನು ಆರಂಭಿಸಲು ಇರುವ ಅನುಕೂಲವೆಂದರೆ ಕರ್ನಾಟಕದಲ್ಲಿ ಸಣ್ಣ ಶಾಲೆಗಳು ಹೆಚ್ಚಿವೆ. ಮಕ್ಕಳ ಸಂಖ್ಯೆ ಕಡಿಮೆ ಇದೆ. 1-9 ಮಕ್ಕಳು ಮಾತ್ರ ಸುಮಾರು 4 ಸಾವಿರ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 1-50 ವಿದ್ಯಾರ್ಥಿಗಳಿರುವ ಸುಮಾರು 25 ಸಾವಿರ ಶಾಲೆಗಳಿವೆ. ಇಲ್ಲಿ ಮಕ್ಕಳಿಗೆ ಸರ್ವತೋಮುಖ ಅಭಿವೃದ್ಧಿ ಮಾಡಬೇಕು. ಅಂಗನವಾಡಿಗಳನ್ನೂ ಆರಂಭಿಸಬೇಕು. ಇಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಆ ಆದೇಶವನ್ನೂ ಪಾಲಿಸಿಲ್ಲ. ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಲ್ಲಿ ಅಪೌಷ್ಠಿಕತೆ ಹೆಚ್ಚಿದೆ. ಕೊರೋನ ಸಮಯದಲ್ಲಿ ಆರೋಗ್ಯ ಪರೀಕ್ಷೆ ಅಗತ್ಯವಾಗಿರುವುದರಿಂದ ಬೇಗ ಅಂಗನವಾಡಿಗಳನ್ನು ತೆರೆಯಬೇಕು ಎಂದು ಅವರು ಮನವಿ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X