ಪೊಲೀಸ್ ಠಾಣೆಗೆ ಹಾಜರಾಗುವಂತೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಿಗೆ ಉತ್ತರಪ್ರದೇಶ ಪೊಲೀಸರ ಸಮನ್ಸ್

ಲಕ್ನೊ:ಇತ್ತೀಚೆಗೆ ಗಾಝಿಯಾಬಾದ್‌ನಲ್ಲಿ ವೃದ್ಧ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಕುರಿತಾದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಯನ್ನು ಗುರುವಾರ ವಿಚಾರಣೆಗೆ ಕರೆದಿದ್ದಾರೆ.
ತಾನು ವಿಚಾರಣೆಗಾಗಿ ವೀಡಿಯೊ ಕರೆಯಲ್ಲಿ ಸ್ವತಃ ಲಭ್ಯವಿರುವುದಾಗಿ ಮಹೇಶ್ವರಿ ಹೇಳಿದ್ದರು. ಆದರೆ ಉತ್ತರಪ್ರದೇಶ ಪೊಲೀಸರು ವೀಡಿಯೊ ಕರೆ ಬೇಡ, ಸ್ವತಃ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ.
ಹಲವಾರು ಪತ್ರಕರ್ತರು, ಕಾಂಗ್ರೆಸ್ ಮುಖಂಡರೊಂದಿಗೆ ಟ್ವಿಟರ್ ಸಂಸ್ಥೆಯ ವಿರುದ್ಧವೂ ಕಳೆದ ವಾರ ಪ್ರಕರಣ ದಾಖಲಾಗಿದ್ದು, ಈ ಹಲ್ಲೆ ಕುರಿತು ಅವರು ಹಂಚಿಕೊಂಡಿರುವ ಟ್ವೀಟ್‌ಗಳು "ದಾರಿತಪ್ಪಿಸುವ" ಹಾಗೂ "ಕೋಮು ಭಾವನೆಗಳನ್ನು ಪ್ರಚೋದಿಸುವ" ಗುರಿಯನ್ನು ಹೊಂದಿವೆ ಎಂದು ಆರೋಪಿಸಲಾಗಿದೆ.
Next Story