ಟೋಕಿಯೊ ಒಲಿಂಪಿಕ್ಸ್ : ಮನ್ ಪ್ರೀತ್ ನೇತೃತ್ವದ ಭಾರತದ ಪುರುಷರ ಹಾಕಿ ತಂಡ ಪ್ರಕಟ

photo: The indian express
ಹೊಸದಿಲ್ಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ಗೆ ಭಾರತವು ಮಂಗಳವಾರ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಮನ್ ಪ್ರೀತ್ ಸಿಂಗ್ ಗೆ ನಾಯಕತ್ವದ ಹೊಣೆವಹಿಸಲಾಗಿದ್ದು, ಡಿಫೆಂಡರ್ ಗಳಾದ ಬೀರೇಂದ್ರ ಲಾಕ್ರಾ ಹಾಗೂ ಹರ್ಮನ್ ಪ್ರೀತ್ ಸಿಂಗ್ ಉಪ ನಾಯಕರಾಗಿ ನೇಮಕಗೊಂಡಿದ್ದಾರೆ.
ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತವು 16 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಘೋಷಿಸಿದೆ.
ನನಗೆ ಮೂರನೇ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ. ಈ ಬಾರಿ ನನಗೆ ನಾಯಕತ್ವದ ಹೊಣೆವಹಿಸಲಾಗಿದೆ. ಇಂತಹ ಜವಾಬ್ದಾರಿ ನೀಡುವುದರಿಂದ ನನಗಿದು ಹೆಮ್ಮೆಯ ಕ್ಷಣ ಎಂದು ಹಾಕಿ ಇಂಡಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮನ್ ಪ್ರೀತ್ ಹೇಳಿದ್ದಾರೆ.
ಜುಲೈ 24ರಂದು ನ್ಯೂಝಿಲ್ಯಾಂಡ್ ಅನ್ನು ಎದುರಿಸುವ ಮೂಲಕ ಒಲಿಂಪಿಕ್ಸ್ ನಲ್ಲಿ ತನ್ನ ಅಭಿಯಾನವನ್ನು ಭಾರತವು ಆರಂಭಿಸಲಿದೆ.
Next Story