ಗಂಗಾ ಕಾಲುವೆಯಲ್ಲಿ ಹೂಳೆತ್ತುವಾಗ 2 ಕಾರಿನೊಳಗೆ ಎರಡು ಶವ ಪತ್ತೆ

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಮುಝಾಫರ್‌ನಗರದ ಗಂಗಾ ಕಾಲುವೆಯಲ್ಲಿ ಹೂಳೆತ್ತುವ ಸಮಯದಲ್ಲಿ 55 ಕಿ.ಮೀ ಅಂತರದಲ್ಲಿ ಎರಡು ಕಾರಿನಲ್ಲಿ ಎರಡು ಶವಗಳನ್ನು ಹೊರತೆಗೆಯಲಾಯಿತು.
ಶವಗಳನ್ನು ಗುರುತಿಸಲಾಗಿದೆ ಹಾಗೂ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿಯಿಂದ ನಾಪತ್ತೆಯಾಗಿದ್ದ ದಿಲ್ಶಾದ್ ಅನ್ಸಾರಿ (27) ಕಾರಿನ ಹಿಂದಿನ ಸೀಟಿನಲ್ಲಿ ಪತ್ತೆಯಾಗಿದ್ದಾರೆ. ಮುಝಫರ್ ನಗರದ ಬಾಘ್ರಾ ಪ್ರದೇಶದ ನಿವಾಸಿಯಾಗಿರುವ ಅನ್ಸಾರಿಯವರನ್ನು ಚಾಲನಾ ಪರವಾನಗಿ ಮೂಲಕ ಗುರುತಿಸಲಾಗಿದೆ.
ಅನ್ಸಾರಿ ಅವರ ಸಹೋದರ ವಾಜಿದ್ ಅನ್ಸಾರಿ ಸಹೋದರ ಕಾಣೆಯಾದ ಕೂಡಲೇ ಈ ವರ್ಷದ ಆರಂಭದಲ್ಲಿ ನ್ಯೂ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅನ್ಸಾರಿ ಅವರ ಶವ ಪತ್ತೆಯಾದ ಸ್ಥಳದಿಂದ 55 ಕಿ.ಮೀ ದೂರದಲ್ಲಿರುವ ಸಿಖೆಡಾ ಪ್ರದೇಶದಲ್ಲಿ ಹರೇಂದ್ರ ದತ್ ಅಟ್ರೆ ಅವರ ಶವ ಪತ್ತೆಯಾಗಿದೆ. ಅಟ್ರೆ ಫೆಬ್ರವರಿಯಿಂದ ಕಾಣೆಯಾಗಿದ್ದರು.
ಶವವನ್ನು ಗುರುತಿಸಿದ ನಂತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗಿದ್ದು, ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಗೌರವ್ ತಿಳಿಸಿದ್ದಾರೆ.







