ಉದಯ ಗಾಣಿಗ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಿ: ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಆಗ್ರಹ
ಉಡುಪಿ, ಜೂ.23: ಯೆಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಭಾಗಿಯಾಗಿರುವುದು ಈಗಾಗಲೇ ಸಾಬೀತಾ ಗಿದೆ. ಬಿಜೆಪಿ ಪಕ್ಷ ಕೊಲೆಯಾದವರ ಬಗ್ಗೆ ಕೇವಲ ಸಹಾನುಭೂತಿ ಪ್ರದರ್ಶಿಸದೆ ಸಾಲದು. ಅದ ರೊಂದಿಗೆ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರಧನ ನೀಡಲು ಬಗ್ಗೆ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಒತ್ತಾಯಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶಗಳಲ್ಲಿ ಕೊಲೆಗಳು ನಡೆದಾಗ ಬೊಬ್ಬೆ ಹಾಕುವ ಸಂಸದೆ ಹಾಗೂ ಹಿಂದೂ ಮುಖಂಡರು ತಮ್ಮದೇ ಪಕ್ಷದ ಕಾರ್ಯಕರ್ತನ ಹತ್ಯೆಯಾ ದಾಗ ಮೌನ ವಹಿಸಿರುವುದು ಬಿಜೆಪಿ ಧ್ವಂಧ್ವ ನಿಲುವಲ್ಲವೇ ಎಂದು ಪ್ರಶ್ನಿಸಿದರು.
ದೇಶದ ಎಲ್ಲ ಹಿಂದುಗಳು ರಾಮ ಮಂದಿರಕ್ಕಾಗಿ ತಮ್ಮ ದೇಣಿಗೆಯನ್ನು ನೀಡಿರುವಾಗ ಪ್ರತಿಯೊಬ್ಬ ವ್ಯಕ್ತಿಗೂ ಹಣ ವಿನಿಯೋಗ ವನ್ನು ಪ್ರಶ್ನಿಸುವ ಹಕ್ಕಿದೆ. ಆದುದರಿಂದ ಅದರಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪ್ರಶ್ನಿಸಿದರೆ ಹಿಂದೂ ಗಳ ಭಾವನೆಗಳ ಘಾಸಿ ಹೇಗೆ ಆಗುತ್ತದೆ. ನಿಧಿ ಅವ್ಯವಹಾರದ ಬಗ್ಗೆ ಮಾತ ನಾಡಿದ ವಿನಯ ಕುಮಾರ್ ಸೊರಕೆಯನ್ನು ಟಾರ್ಗೆಟ್ ಮಾಡಬೇಕಾಗುತ್ತದೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಅವರು ದೂರಿದರು.
ರಾಮ ಮಂದಿರ ನಿರ್ಮಾಣದ ನಿಧಿ ವಿನಿಯೋಗದಲ್ಲಿ ನಡೆದ ಅವ್ಯವಹಾರದ ಬಗ್ಗೆ ಹಲವು ಮಂದಿ ಧ್ವನಿ ಎತ್ತಿದ್ದಾರೆ. ಅದರೊಂದಿಗೆ ಅಯೋಧ್ಯಾ ಟ್ರಸ್ಟ್ ಈಗಾಗಲೇ ಕೆಲವೇ ದಿನಗಳ ಅಂತರದಲ್ಲಿ ಖರೀದಿಸಿದ ಸ್ಥಳವನ್ನು ಹೆಚ್ಚಿನ ಹಣ ನೀಡಿ ಖರೀದಿಸಿದ ಬಗ್ಗೆ ಹೇಳಿಕೆಗಳನ್ನು ನೀಡಲಾಗಿದೆ. ರಾಮ ಭಕ್ತರಿಂದ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟಿಗಾಗಿ ವಿನಿಯೋಗ ಮಾಡುವುದು ರಾಮನಿಗೆ ಮಾಡುವ ದ್ರೋಹ ಎಂದು ಅವರು ಆರೋಪಿಸಿದರು.
ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಕೆಪಿಸಿಸಿ ಪ್ಯಾನಲಿಷ್ಟ್ ವೆರೋನಿಕಾ ಕರ್ನೆಲಿಯೋ, ಪ್ರಧಾನ ಕಾರ್ಯದರ್ಶಿ ಕುಶಲ ಶೆಟ್ಟಿ, ಕಾನೂನು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಪ್ರಶಾಂತ ಜತ್ತನ್ನ, ಬಾಲಕೃಷ್ಣ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ರೋಷನ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.







