Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಮಿಳುನಾಡು ಭಾರತ ಸರಕಾರವನ್ನು 'ಒಕ್ಕೂಟ...

ತಮಿಳುನಾಡು ಭಾರತ ಸರಕಾರವನ್ನು 'ಒಕ್ಕೂಟ ಸರಕಾರ' ಎಂದೇ ಕರೆಯಲಿದೆ: ಸ್ಟಾಲಿನ್ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ23 Jun 2021 8:09 PM IST
share
ತಮಿಳುನಾಡು ಭಾರತ ಸರಕಾರವನ್ನು ಒಕ್ಕೂಟ ಸರಕಾರ ಎಂದೇ ಕರೆಯಲಿದೆ: ಸ್ಟಾಲಿನ್ ಘೋಷಣೆ

‘‘ಇಂಡಿಯಾ ಎಂದರೆ ಭಾರತವಾಗಿದ್ದು, ಅದು ರಾಜ್ಯಗಳ ಒಂದು ಒಕ್ಕೂಟವಾಗಿದೆ ಎಂದು ನಮ್ಮ ಸಂವಿಧಾನದ ಮೊದಲ ಸಾಲಿನಲ್ಲಿ ಹೇಳಲಾಗಿದೆ. ನಾವು ಅದನ್ನು ಅನುಸರಿಸಿದ್ದೇವೆಯೇ ಹೊರತು ಅದಕ್ಕೆ ಬೇರೇನೂ ಅರ್ಥ ಕಲ್ಪಿಸಬಾರದು’’ 

ಹೊಸದಿಲ್ಲಿ,ಜೂ.23: ತಮಿಳುನಾಡು ಸರಕಾರದ ಇಲಾಖೆಗಳು ಇನ್ನು ಮುಂದೆ ಭಾರತ ಸರಕಾರವನ್ನು ಒಕ್ಕೂಟ ಸರಕಾರವೆಂಬುದಾಗಿ ಉಲ್ಲೇಖಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಸಂವಿಧಾನವು ಕೂಡಾ ಕೇಂದ್ರ ಸರಕಾರ ವನ್ನು ಒಕ್ಕೂಟ ಸರಕಾರ (ಯೂನಿಯನ್ ಗವರ್ನಮೆಂಟ್) ಎಂದೇ ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ.
  
ಭಾರತ ಸರಕಾರವನ್ನು ಒಕ್ಕೂಟ ಸರಕಾರವೆಂದು ಕರೆಯುವುದು ‘ಸಾಮಾಜಿಕ ಅಪರಾಧ ’ವೆಂದು ಪರಿಗಣಿಸುವುದು ತಪ್ಪಾದ ಗ್ರಹಿಕೆಯಾಗಿದೆ. ಒಕ್ಕೂಟವೆಂಬ ಪದವು ಸಂಯುಕ್ತ ವ್ಯವಸ್ಥೆಯ ತತ್ವವನ್ನು ಪ್ರತಿಪಾದಿಸುತ್ತದೆಯೆಂದು ಅವರು ಹೇಳಿದ್ದಾರೆ. ತಮಿಳುನಾಡಿನ ಅಧಿಕಾರಿಗಳು ಸಂವಿಧಾನ ಹೇಳಿರುವ ಹಾಗೆ ಭಾರತ ಸರಕಾರವನ್ನು ಒಕ್ಕೂಟ ಸರಕಾರವೆಂದು ಉಲ್ಲೇಖಿಸಲಿದ್ದಾರೆಂದು ಅವರು ಹೇಳಿದರು.
 
ಬುಧವಾರ ನಡೆದ ತಮಿಳುನಾಡು ವಿಧಾನಸಭಾ ಕಲಾಪದ ವೇಳೆ ಬಿಜೆಪಿ ಸದಸ್ಯ ನೈನಾರ್ ನಾಗೇಂದ್ರನ್ ಅವರು ಡಿಎಂಕೆಯು ದೀರ್ಘ ಸಮಯದಿಂದ ‘ಮಾದಿಯಾ ಅರಸು’ (ತಮಿಳಿನಲ್ಲಿ ಕೇಂದ್ರ ಸರಕಾರ ಎಂದು ಅರ್ಥ) ಪದಕ್ಕೆ ಪರ್ಯಾಯವಾಗಿ ‘ಒಂಡ್ರಿಯಾ ಅರಸು’ (ಕೇಂದ್ರ ಸರಕಾರ) ಎಂಬ ಪದವನ್ನು ಬಳಸುತ್ತಿದೆಯೆಂದು ಆಕ್ಷೇಪ ವ್ಯಕ್ತಪಡಿಸಿದಾಗ, ಮುಖ್ಯಮಂತ್ರಿ ಸ್ಟಾಲಿನ್ ಹೀಗೆ ಉತ್ತರಿಸಿದ್ದಾರೆ.
 
ಮೇ ತಿಂಗಳಲ್ಲಿ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತಮಿಳುನಾಡು ಸರಕಾರವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರ ಎಂದು ಉಲ್ಲೇಖಿಸುತ್ತಿದೆ. ಇದಕ್ಕೆ ಬಿಜೆಪಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಮೋದಿ ಆಡಳಿತದ ವಿರುದ್ಧ ಸ್ಟಾಲಿನ್ ಆಳ್ವಿಕೆಯ ರಾಜಕೀಯ ನಡೆ ಇದಾಗಿದೆಯೆಂದು ಅವರು ಟೀಕಿಸಿದ್ದಾರೆ.
  
‘‘ ಇಂಡಿಯಾ ಎಂದರೆ ಭಾರತವಾಗಿದ್ದು, ಅದು ರಾಜ್ಯಗಳ ಒಂದು ಒಕ್ಕೂಟವಾಗಿದೆ ಎಂದು ನಮ್ಮ ಸಂವಿಧಾನದ ಮೊದಲ ಸಾಲಿನಲ್ಲಿ ಹೇಳಲಾಗಿದೆ. ನಾವು ಅದನ್ನು ಅನುಸರಿಸಿದ್ದೇವೆಯೇ ಹೊರತು ಅದಕ್ಕೆ ಬೇರೇನೂ ಅರ್ಥ ಕಲ್ಪಿಸಬಾರದು’’ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು. 

‘‘ಡಿಎಂಕೆಯು ಭಾರತ ಸರಕಾರಕ್ಕೆ ಒಕ್ಕೂಟ ಸರಕಾರವೆಂಬ ಪದ ಬಳಸುತ್ತಿರುವುದು ಹೊಸದೇನೂ ಅಲ್ಲ. 1957ರ ಚುನಾವಣಾ ಪ್ರಣಾಳಿಕೆಯಲ್ಲಿ ಯೇ ಡಿಎಂಕೆಯು ‘ ಭಾರತ ಒಕ್ಕೂಟ’ ಎಂಬ ಪದವನ್ನು ಬಳಸಿಕೊಂಡಿತ್ತು. ಅದಕ್ಕಾಗಿ ಕೆಲವರು ನಮ್ಮನ್ನು ಟೀಕಿಸಿದ್ದರು ’’ ಎಂದವರು ಹೇಳಿದರು. ಅರಿಯಾನ್ನರ್ ಅಣ್ಣಾ (ಅಣ್ಣಾ ದೊರೈ) ಹಾಗೂ ನಮ್ಮ ನಾಯಕ ಕಲೈನಾರ್ (ಕರುಣಾನಿಧಿ) ಕೂಡಾ ಬಳಸಿಕೊಂಡಿರದ ಪದವನ್ನು ನಾವು ಬಳಸಿದ್ದೇವೆಂದು ಕೆಲವರು ಆಕ್ಷೇಪಿಸಿದ್ದಾರೆ. 

ಆದರೆ ಅಣ್ಣಾದೊರೈ ಅವರು, 1963ರ ಜನವರಿ 25ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ ರಾಜಕೀಯ ಸಾರ್ವಭೌಮತೆಯು ಜನತೆಯಿಂದ ಎತ್ತಿಹಿಡಿಯಲ್ಪಡುತ್ತದೆ ಹಾಗೂ ಕಾನೂನಿನ ಸಾರ್ವಭೌಮತೆಯನ್ನು ಫೆಡರಲ್ ಒಕ್ಕೂಟ (ಕೇಂದ್ರ ಸರಕಾರ) ಹಾಗೂ ಅದರ ಅಂಗಗಳು ಅಂದರೆ ರಾಜ್ಯಗಳ ನಡುವೆ ವಿಭಜಿಸಲಾಗಿದೆ ’ಎಂದು ಹೇಳಿದ್ದರೆಂದು ಸ್ಟಾಲಿನ್ ಸದನಕ್ಕೆ ತಿಳಿಸಿದರು. 

ತಮಿಳುನಾಡಿನ ಮಹನೀಯರಾದ ಮೈಲಾಯ್ ಪೊನ್ನುಸ್ವಾಮಿ ಶಿವಜ್ಞಾನಮ್ ಅಥವಾ ಮಾ ಪೊ ಸಿ ಅವರು ಕೇಂದ್ರ ಸರಕಾರ ಎಂಬ ಪದದ ಬದಲಿಗೆ ಸಮಷ್ಟಿ ಎಂಬ ಪದವನ್ನು ಬಳಸಿದ್ದರು.‘ ಅತಿರೇಕದ ಕೇಂದ್ರೀಯವಾದವನ್ನು ತೊರೆಯಿರಿ ಹಾಗೂ ನೈಜ ಒಕ್ಕೂಟವನ್ನು ಸ್ವಾಗತಿಸಿ’ ಎಂದು ರಾಜಾಜಿ ಬರೆದಿದ್ದಾರೆ. ಹೀಗಾಗಿ ಯಾರೂ ಕೂಡಾ ಒಕ್ಕೂಟ ಎಂಬ ಪದದ ಬಗ್ಗೆ ಭೀತಿಗೊಳ್ಳಬಾರದು. ಆ ಪದವು ಸಂಯುಕ್ತ ವ್ಯವಸ್ಥೆಯ ತತ್ವವನ್ನು ಪ್ರತಿಪಾದಿಸುತ್ತದೆ. ಹೀಗಾಗಿ ನಾವು ಅದನ್ನು ಬಳಸಿಕೊಳ್ಳುತ್ತಿದ್ದೇವೆ. ನಾವು ಅದನ್ನು ಬಳಸುತ್ತಿದ್ದೇವೆ ಮತ್ತು ಅದರ ಬಳಕೆಯನ್ನು ಮುಂದುವರಿಸಲಿದ್ದೇವೆ ಎಂದು ಸ್ಟಾಲಿನ್ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X