ಕೋಳಿ ಅಂಕಕ್ಕೆ ದಾಳಿ: ಸೊತ್ತು ವಶ
ಕಾರ್ಕಳ, ಜೂ. 23: ಮುಂಡ್ಕೂರು ಗ್ರಾಮದ ಒಗ್ಗೇರಬೆಟ್ಟು ಎಂಬಲ್ಲಿ ಜೂ.22ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜ್ವಲ್ ಬಂಧಿತ ಆರೋಪಿ. ದಾಳಿ ವೇಳೆ ಉಳಿದ ಆರೋಪಿಗಳು ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ 5 ಹುಂಜ ಕೋಳಿ, 2 ಬಾಳುಕತ್ತಿ, 3 ಬೈಕ್, 510ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





