ಕೋಟ: ತೋಡಿಗೆ ಬಿದ್ದು ಕಿರಿಯ ಆರೋಗ್ಯ ನಿರೀಕ್ಷಕ ಮೃತ್ಯು
ಕೋಟ, ಜೂ. 23: ರಸ್ತೆ ಬದಿಯ ತೋಡಿನ ನೀರಿಗೆ ಬಿದ್ದು ಬಿದ್ಕಲ್ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ನಿರೀಕ್ಷಕರೊಬ್ಬರು ಮೃತಪಟ್ಟ ಘಟನೆ ಜೂ.22ರಂದು ಸಂಜೆ ವೇಳೆ ಕಕ್ಕುಂಜೆ- ಬಿದ್ಕಲ್ಕಟ್ಟೆ ರಸ್ತೆಯ ಕಂಬ್ಲಿಕಲ್ಲು ದೇವಸ್ಥಾನದ ಹತ್ತಿರ ನಡೆದಿದೆ.
ಮೃತರನ್ನು ವಂಡಾರು ಗ್ರಾಮದ ಮಾರ್ವಿಯ ಕೃಷ್ಣಮೂರ್ತಿ ಆಚಾರ್ಯ ಎಂಬವರ ಮಗ ಮಂಜುನಾಥ ಆಚಾರ್ಯ(32) ಎಂದು ಗುರುತಿಸಲಾಗಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ತಲೆ ನೋವಾಗುತ್ತಿದೆ ಎಂದು ಹೇಳಿ ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವುದಾಗಿ ಹೊರಟಿದ್ದರು. ನಂತರ ನಾಪತ್ತೆಯಾಗಿದ್ದ ಇವರನ್ನು ಹುಡುಕಾಟ ನಡೆಸಿದಾಗ ತೋಡಿನ ನೀರಿನಲ್ಲಿ ಕವುಚಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





