ತಮಿಳುನಾಡು: ವಿವಾಹದ ಸುದ್ದಿ ತಿಳಿದು ಪ್ರಿಯತಮೆ ನಿವಾಸಕ್ಕೆ ತೆರಳಿದ್ದ ಯುವಕನ ಥಳಿಸಿ ಹತ್ಯೆ

ದಿಂಡುಗಲ್, ಜೂ. 23: ಪ್ರಿಯತಮೆಯ ವಿವಾಹದ ಸುದ್ದಿ ತಿಳಿದು ಆಕೆಯ ನಿವಾಸಕ್ಕೆ ತೆರಳಿದ 21 ವರ್ಷದ ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ತಮಿಳುನಾಡಿನ ದಿಂಡುಗಲ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಯುವತಿಯ ಕುಟುಂಬದ ನಾಲ್ವರನ್ನು ಬಂಧಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.. ಹತ್ಯೆಯಾದ ವ್ಯಕ್ತಿಯನ್ನು ದಿಂಡುಗಲ್ ಜಿಲ್ಲೆಯ ನಾಥಮ್ ಸಮೀಪದ ಪಡುಪಟ್ಟಿಯ ಭಾರತಿರಾಜಾ (21) ಎಂದು ಗುರುತಿಸಲಾಗಿದೆ.
ಈತ ಕ್ಯಾಟರಿಂಗ್ ಶಿಕ್ಷಣ ಪಡೆದು, ಸಿರುಮಲೈಯ ಖಾಸಗಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಭಾರತಿರಾಜಾ ಮೂಂಗಿಲ್ಪಟ್ಟಿಯ ಮುಲ್ಲೈ ನಗರದ 20 ವರ್ಷದ ಯುವತಿ ಪರಮೇಶ್ವರಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಭಾರತಿರಾಜನೊಂದಿಗೆ ಯುವತಿಯ ಸಂಬಂಧವನ್ನು ತಿಳಿದ ಆಕೆಯ ಕುಟುಂಬ ಬೇರೊಬ್ಬನೊಂದಿಗೆ ವಿವಾಹ ನಿಶ್ಚಯಿಸಿತ್ತು. ಪರಮೇಶ್ವರಿ ತನ್ನ ವಿವಾಹದ ಕುರಿತು ಭಾರತಿರಾಜ್ ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತಿರಾಜ ತನ್ನ ಇಬ್ಬರು ಗೆಳೆಯರೊಂದಿಗೆ ಸೋಮವಾರ ಪರಮೇಶ್ವರಿಯ ನಿವಾಸಕ್ಕೆ ತೆರಳಿದ್ದ. ಈ ಸಂದರ್ಭ ನಡೆದ ಗಲಾಟೆಯಲ್ಲಿ ಭಾರತಿರಾಜ ತೀವ್ರ ಗಾಯಗೊಂಡಿದ್ದ ಎನ್ನಲಾಗಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಸಲು ಪ್ರಯತ್ನಿಸಲಾಗಿತ್ತು. ಆದರೆ, ಆಸ್ಪತ್ರೆಗೆ ತಲಪು ಮುನ್ನವೇ ಆತ ಮೃತಟ್ಟಿದ್ದಾನೆ ಎಂದು ತಿಳಿದು ಬಂದಿದೆ.





