ಜು.7ರಿಂದ ಕೆಪಿಎಸ್ಸಿ ಪರೀಕ್ಷೆ
ಬೆಂಗಳೂರು, ಜೂ.24: ಕೊರೋನ ಕಾರಣದಿಂದಾಗಿ ಮುಂದೂಡಲಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಪರೀಕ್ಷೆಗೆ ಕೊನೆಗೂ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಜು.7ರಿಂದ 11 ಮತ್ತು ಜು.13-14ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪರಿಷ್ಕೃತ ಪ್ರವೇಶ ಪತ್ರವನ್ನು ಜೂ.28ರಿಂದ ಆಯೋಗದ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ತಿಳಿಸಲಾಗಿದೆ.
ಮೊದಲೇ ನಿರ್ಧರಿಸಿದ್ದ ಪ್ರಕಾರ ಜೂ.24ರ ಎರಡನೆ ದಿನದ ಕೆಪಿಎಸ್ಸಿ(ಕರ್ನಾಟಕ ಲೋಕಸೇವಾ ಆಯೋಗ) ಪರೀಕ್ಷೆ ನಡೆಯಬೇಕಿತ್ತು. ಆದರೆ, ನಿಗದಿತ ದಿನಾಂಕಕ್ಕೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಈ ಮೊದಲು ಜೂ.22ರಿಂದ 30ರ ವರೆಗೆ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಮುಂದೂಡಿಕೆಯಾದ ಪರೀಕ್ಷೆಗಳಿಗೆ ಕೆಪಿಎಸ್ಸಿ ಹೊಸ ದಿನಾಂಕ ನಿಗದಿ ಮಾಡಿದೆ.
Next Story





