ಲಸಿಕೆ ಬಗ್ಗೆ ಜನಜಾಗೃತಿ ಮೂಡಿಸಲು ಖಾಝಿ ಮಾಣಿ ಉಸ್ತಾದ್ ಕರೆ
ಮಂಗಳೂರು : ಕೋವಿಡ್ ನಿಂದ ಸುರಕ್ಷಿತರಾಗಲು ಎಲ್ಲರೂ ಕೋವಿಡ್ ಪ್ರತಿರೋಧ ಲಸಿಕೆಯನ್ನು ಪಡೆಯಬೇಕೆಂದು ಮತ್ತು ಈ ಬಗ್ಗೆ ಜನರ ನಡುವೆ ಜಾಗೃತಿಯನ್ನು ಮೂಡಿಸಬೇಕೆಂದು ಸುನ್ನೀ ಜಮ್‌ಇಯ್ಯತುಲ್ ಉಲಮಾ ಕರ್ನಾಟಕ, ಖಾಝಿ ಮಾಣಿ ಉಸ್ತಾದ್ ಅವರು ಕರೆ ನೀಡಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಪ್ರತಿರೋಧ ಲಸಿಕೆಯನ್ನು ಕೊಡಿಸುವ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡುತ್ತಿದ್ದು ಲಸಿಕೆ ಬಗ್ಗೆ ತಪ್ಪು ಗ್ರಹಿಕೆಗಳು ಅಗತ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ರೋಗವನ್ನು ತಡೆಗಟ್ಟುವ ವೈದ್ಯಲೋಕದ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕೆಂದೂ ಸಮಾಜ ಸೇವಕರು, ಸಂಘಟನೆಗಳು ಮುಂದೆ ನಿಂತು ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸ ಬೇಕೆಂದೂ ಜಮ್‌ಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕಾರ್ಯದರ್ಶಿ ಕೆ ಮಹ್‌ಮೂದ್ ಮುಸ್ಲಿಯಾರ್ ಎಡಪಾಲ ಕೊಡಗು, ಕೊಶಾಧಿಕಾರಿ ಹುಸೈನ್ ಸಅದಿ ಕೆ ಸಿ ರೋಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





