ಅರುಣಾಚಲ ಗಡಿಗೆ ಹತ್ತಿರವಿರುವ ಟಿಬೆಟ್ನಲ್ಲಿ ಮೊದಲ ಬುಲೆಟ್ ರೈಲು ಆರಂಭಿಸಿದ ಚೀನಾ

ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನಾ ತನ್ನ ಮೊದಲ ಸಂಪೂರ್ಣ ವಿದ್ಯುದ್ದೀಕರಿಸಿದ ಬುಲೆಟ್ ರೈಲನ್ನು ಟಿಬೆಟ್ನ ಹಿಮಾಲಯನ್ ಪ್ರದೇಶದಲ್ಲಿ ಶುಕ್ರವಾರ ಕಾರ್ಯರೂಪಕ್ಕೆ ತಂದಿದ್ದು,ಇದು ಪ್ರಾಂತೀಯ ರಾಜಧಾನಿ ಲಾಸಾ ಹಾಗೂ ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣವಾದ ನಿಂಗ್ಚಿಯನ್ನು ಸಂಪರ್ಕಿಸುತ್ತದೆ.
ಜುಲೈ 1 ರಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ದ ಶತಮಾನೋತ್ಸವದ ಮುನ್ನ ಸಿಚುವಾನ್-ಟಿಬೆಟ್ ರೈಲ್ವೆಯ 435.5 ಕಿ.ಮೀ ದೂರದ ಲಾಸಾ-ನಿಂಗ್ಚಿ ವಿಭಾಗವನ್ನು ಉದ್ಘಾಟಿಸಲಾಗಿದೆ.
ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಮೊದಲ ವಿದ್ಯುದ್ದೀಕೃತ ರೈಲ್ವೆ ಶುಕ್ರವಾರ ಬೆಳಿಗ್ಗೆ ಆರಂಭವಾಯಿತು. ಲಾಸಾವನ್ನು ನಿಂಗ್ಚಿಯೊಂದಿಗೆ "ಫಕ್ಸಿಂಗ್" ಬುಲೆಟ್ ರೈಲುಗಳು ಸಂಪರ್ಕಿಸುತ್ತದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story





