ಜೂ. 26: ಸಯ್ಯಿದ್ ಹಾರೂನ್ ತಂಙಳ್ ಅನುಸ್ಮರಣಾ ಸಂಗಮ
ಮಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಸಯ್ಯಿದ್ ಹಾರೂನ್ ಅಲ್ ಬುಖಾರಿ ಭದ್ರಾವತಿರವರ ಅನುಸ್ಮರಣಾ ಸಂಗಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ಜೂನ್ 26ರ ರಾತ್ರಿ 8:30ಕ್ಕೆ ಝೂಮ್ ಆ್ಯಪ್ ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಯೂ ಟ್ಯೂಬ್ ಚಾನೆಲ್ ನಲ್ಲಿ ನಡೆಯಲಿರುವುದು.
ಸಯ್ಯಿದ್ ಎ.ಪಿ.ಎಸ್ ಹುಸೈನ್ ಅಲ್ ಅಹ್ದಲ್ ಚಿಕ್ಕಮಂಗಳೂರು ದುಆ: ನೆರವೇರಿಸಲಿರುವರು. ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ನೌಫಲ್ ಸಖಾಫಿ ಕಳಸ ಅನುಸ್ಮರಣಾ ಭಾಷಣ ಮಾಡಲಿರುವರು ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





