ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಿಂದ ವನಮಹೋತ್ಸವ

ಬ್ರಹ್ಮಾವರ, ಜೂ.25: ಬ್ರಹ್ಮಾವರ ಸ್ಪೊರ್ಟ್ಸ್ ಕ್ಲಬ್ ಆಶ್ರಯದಲ್ಲಿ ವನಮಹೋತ್ಸವದ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವು ಇಂದು ಕ್ಲಬ್ಬಿನ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅನಿವಾಸಿ ಭಾರತಿ ಹಾಗೂ ಉದ್ಯಮಿ ಕೆಂಜೂರು ಶಶಿಧರ ಶೆಟ್ಟಿ ಬಹರೈನ್ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದು 100ಕ್ಕೂ ಹೆಚ್ಚು ಗಿಡಗಳನ್ನು ಕ್ಲಬ್ಬಿನ ಆವರಣದಲ್ಲಿ ನೆಡಲಾಗಿದ್ದು, ಮುಂಬರುವ ದಿನಗಳಲ್ಲಿ ಕ್ಲಬ್ ವತಿಯಿಂದ ಇನ್ನಷ್ಟು ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸ್ಪೊರ್ಟ್ಸ್ ಕ್ಲಬ್ ಅಧ್ಯಕ್ಷ ಎಂ.ಚಂದ್ರಶೇಖರ ಹೆಗ್ಡೆ ತಿಳಿಸಿದರು.
ಕ್ಲಬ್ ಕಾರ್ಯದರ್ಶಿ ಗ್ರೆಗೊರಿ ಡಿಸಿಲ್ವ, ಸದಸ್ಯರಾದ ಜೇಮ್ಸ್ ಒಲಿವೆರ, ಜೋಸೆಫ್ ಸುವರೆಸ್, ಸುದೇಶ್ ಹೆಗ್ಡೆ, ಪ್ರಮೋದ್ ಶೆಟ್ಟಿ, ಪ್ರಸನ್ನ ಶೆಟ್ಟಿ, ವಿವೇಕ್ ಕರ್ನೇಲಿಯೋ ಮೊದಲಾದವರು ಉಪಸ್ಥಿತರಿದ್ದರು.
Next Story





