ಕಾಪು: ಎಚ್‌ಆರ್‌ಎಸ್‌ನಿಂದ ಸ್ಯಾನಿಟೈಸರ್ ಕಿಟ್ ವಿತರಣೆ

ಕಾಪು, ಜೂ. 25: ಹುಮ್ಯಾನಿಟಿರೇನಿಯಮ್ ರಿಲೀಫ್ ಸೊಸೈಟಿ ಕಾಪು ತಾಲೂಕು ವತಿಯಿಂದ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸರ್ ಕಿಟ್ಗಳನ್ನು ಇಂದು ಹಸ್ತಾಂತರಿಸಲಾಯಿತು.
ಕೇಂದ್ರದ ವೈದ್ಯಾಧಿಕಾರಿ ಸುಬ್ರಾಯ ಕಾಮತ್ ಅವರಿಗೆ ಕಿಟ್ ಹಸ್ತಾಂತರಿಸಿದ ಎಚ್‌ಆರ್‌ಎಸ್ ಮಾಜಿ ಜಿಲ್ಲಾ ಕರಾವಳಿ ವಲಯ ಸಂಚಾಲಕ ಅನ್ವರ್ ಅಲಿ ಕಾಪು ಮಾತನಾಡಿ, ಇಂದು ಕೆಲವು ಕಡೆ ಲಸಿಕೆ ವಿತರಿಸಲ್ಪಡುವ ಕೇಂದ್ರಗಳು ತಮ್ಮ ಪ್ರಾಂತಿಯಕ್ಕೆ ಪ್ರಾತಿನಿಧ್ಯ ನೀಡುತ್ತಾ ಇತರ ಸುತ್ತ ಮುತ್ತಲಿನ ಪ್ರದೇಶದಿಂದ ಬಂದವರಿಗೆ ವಾಪಸು ಕಳುಹಿತ್ತಿವೆ. ಈ ಕ್ರಮ ಸರಿಯಲ್ಲ. ಟೋಕನ್ ನೀಡುವ ಸಂದರ್ಭದಲ್ಲಿ ಆ ಕೇಂದ್ರಕ್ಕೆ ಯಾರು ಬಂದು ಸರತಿ ಸಾಲಿನಲ್ಲಿ ನಿಂತರೆ ಅವರನ್ನು ತಡೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕ ಹೇಮಂತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬಂದಿ, ಎಚ್‌ಆರ್‌ಎಸ್‌ನ ಅನೀಸ್ ಅಲಿ, ಸಾಹಿಲ್, ಸಕ್ಲೇನ್ ಪಾಷ, ಅಬ್ದುಲ್ ಅಹದ್ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





