ಹಡೀಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ : ಬಿ.ಸಿ.ಪಾಟೀಲ್

ಮಂಗಳೂರು, ಜೂ.25: ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ಸರಕಾರ ಪ್ರೋತ್ಸಾಹ ನೀಡಲಿದೆ. ಸಾಮೂಹಿಕ ಕೃಷಿ ಪದ್ಧತಿ (ಫಾರ್ಮ ಕ್ರಷಿ)ಯನ್ನು ಉತ್ತೇಜಿಸಲು ಸರಕಾರದ ವತಿಯಿಂದ ಸಬ್ಸಿಡಿ ನೀಡುವ ಯೋಜನೆ ಸರಕಾರದ ಮುಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನಗರದ ಕುಂಜತ್ತಬೈಲ್ ಪ್ರದೇಶದ ಹಡಿಲು ಭೂಮಿಯ ಗದ್ದೆಗಳಲ್ಲಿ ಬತ್ತ ಬೆಳೆಯುವ ಯಾಂತ್ರೀಕೃತ ಬತ್ತ ನಾಟಿ ಕ್ರಷಿ ಯೋಜನೆಗೆ ಅವರಿಂದ ಚಾಲನೆ ನೀಡಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಎಕ್ರೆ ಪ್ರದೇಶದ ಹಡಿಲು ಭೂಮಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪುನಾರಂಭಿಸುವ ಯೋಜನೆಗೆ ಸರಕಾರದ ಕೃಷಿ ಇಲಾಖೆಯ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕನಿಷ್ಠ 20 ರೈತರು ಜೊತೆ ಸೇರಿ ನಡೆಸುವ ಫಾರ್ಮ್ ಕ್ರಷಿ ಯೋಜನೆಗೆ ಸರಕಾರ ಸಬ್ಸಿಡಿ ನೀಡಲಿದೆ. ರಾಜ್ಯದಲ್ಲಿ ಇಂತಹ ಫಾರ್ಮ್ ಕೃಷಿ ಯೋಜನೆಯ ಸುಮಾರು 200 ಘಟಕಗಳ ನ್ನು ಫೈಲಟ್ ಯೋಜನೆಯಾಗಿ ಆರಂಭಿ ಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಬತ್ತದ ಬೆಳೆಗೆ ವಿಶೇಷ ಪ್ಯಾಕೇಜ್ ಮತ್ತೆ ಆರಂಭಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರ ಮೂಲಕ ಪ್ರಸ್ತಾವನೆ ಬಂದಿದೆ. ಕರಾವಳಿಯಲ್ಲಿ ಬತ್ತದ ಕೃಷಿ ಈ ಹಿಂದೆ ಇದ್ದ ವಿಶೇಷ ಪ್ಯಾಕೇಜ್ ಯೋಜನೆ ಸ್ಥಗಿತ ಗೊಂಡಿದ್ದು .ಈ ಯೋಜನೆ ಯನ್ನು ಮತ್ತೆ ಆರಂಭಿಸುವ ಬಗ್ಗೆ ಮರು ಪರಿಶೀಲಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ, ಶಾಸಕ ಡಾ.ಭರತ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.







.jpeg)



