ಮಂಗಳೂರು: ಎಟಿಎಂ ಅವಧಿ ಮುಗಿದಿದೆ ಎಂದು ಕರೆ ಮಾಡಿ 1 ಲಕ್ಷ ರೂ. ವಂಚನೆ

ಮಂಗಳೂರು, ಜೂ.26: ರಾಷ್ಟ್ರೀಕೃತ ಬ್ಯಾಂಕ್‌ವೊಂದರಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಅಪರಿಚಿತರು ಹಿರಿಯ ನಾಗರಿಕರೋರ್ವರ ಖಾತೆಯಿಂದ 1 ಲಕ್ಷ ರೂ. ಲಪಟಾಯಿಸಿರುವ ಘಟನೆ ನಡೆದಿದೆ.
73 ವರ್ಷದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಅಪರಿಚಿತರು ‘ನಿಮ್ಮ ಎಟಿಎಂ ಅವಧಿ ಮುಗಿದಿದ್ದು, ಅದನ್ನು ನವೀಕರಿಸಲು ಅದರ ನಂಬರ್ ಮತ್ತಿತರ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು. ನಂತರ ಅವರ ಮೊಬೈಲ್‌ಗೆ ಒಟಿಪಿ ಕಳುಹಿಸಿ ಆ ಒಟಿಪಿ ಪಡೆದುಕೊಂಡರು. ಬಳಿಕ ಖಾತೆದಾರರ ಖಾತೆಯಿಂದ 1 ಲಕ್ಷ ರೂ.ನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
Next Story





