ಶಾಸಕರಿಂದ ಸೌಹಾರ್ದ ಕೆಡಿಸುವ ಯತ್ನ : ಉಡುಪಿ ಬ್ಲಾಕ್ ಕಾಂಗ್ರೆಸ್
ಉಡುಪಿ: ಕೊಡವೂರು ಕಲ್ಮತ್ ಮಸೀದಿಯ ಜಾಗವನ್ನು 2020ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮಸೀದಿಯ ಹೆಸರಿಗೆ ಗಜೆಟ್ ನೋಟಿಫಿಕೇಶನ್ ಮಾಡಿಸಿ ಈಗ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಅಕ್ರಮವಾಗಿ ಸರಕಾರದ ವಶಕ್ಕೆ ಹಿಂಪಡೆದಿರುವ ಉಡುಪಿ ಶಾಸಕ ರಘುಪತಿ ಭಟ್, ಈ ಗಜೆಟ್ ನೋಟಿಫಿಕೇಶನ್ 2018ರಲ್ಲಿ ಕಾಂಗ್ರೆಸ್ ಸರಕಾರ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ.
ಮಸೀದಿ ಹೆಸರಿಗೆ ಆಗಿರುವ ಜಾಗವನ್ನು ಕಾನೂನುಬಾಹಿರವಾಗಿ ಹಿಂಪಡೆದು ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಗೊಂದಲ ಉಂಟು ಮಾಡುವ ಮೂಲಕ ಜಿಲ್ಲೆಯ ಸೌಹಾರ್ದ ಹಾಳು ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಕಟನೆಯಲ್ಲಿ ತಿಳಿಸಿದೆ.
Next Story





