ಹುತಾತ್ಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯನ್ನು ಮತ್ತೊಮ್ಮೆ ಅಪವಾದಕ್ಕೀಡಾಗಿಸಿದ ಪ್ರಜ್ಞಾ ಸಿಂಗ್ ಠಾಕೂರ್

ಸೆಹೋರ್: 2008ರಲ್ಲಿ ನಡೆದ ಮಾಲೆಂಗಾವ್ ಸ್ಫೋಟದಲ್ಲಿ ಪ್ರಜ್ಞಾ ಸಿಂಗ್ ಕೈವಾಡವನ್ನು ಬಯಲಿಗೆಳೆದಿದ್ದ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಮುಂಬೈ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಕುರಿತಾದಂತೆ ಅಪವಾದ ಹೊರಿಸುವ ಮೂಲಕ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಗುರುವನ್ನು ಹೇಮಂತ್ ಕರ್ಕರೆ ಪ್ರಶ್ನಿಸುವ ವೇಳೆ ಚಿತ್ರಹಿಂಸೆ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಂತಹಾ ಸಂದರ್ಭ ನನಗೂ ಎದುರಾಗಿತ್ತು. ನಾನು ʼಸುಳ್ಳು ಪ್ರಕರಣದಲ್ಲಿʼ ಸಿಲುಕಿದ್ದ ವೇಳೆ ನನಗೆ ತುರ್ತುಪರಿಸ್ಥೀತಿ ಎದುರಾಗಿತ್ತು. ಈ ವೇಳೆ ಕರ್ಕರೆ ವಿರುದ್ಧ ಅಪವಾದ ಹೊರಿಸಿದ ಆಕೆ, "ತನಿಖೆಯ ವೇಳೆ ನನಗೆ 8ನೇ ತರಗತಿಯಲ್ಲಿ ಬೋಧಿಸುತ್ತಿದ್ದ ಗುರುಗಳ ಬೆರಳನ್ನು ತುಂಡರಿಸಿದ್ದರು ಮತ್ತು 8ನೇ ಕ್ಲಾಸಲ್ಲಿರುವಾಗ ನಾನೇನು ಮಾಡುತ್ತಿದ್ದೆ? ಎಂದು ಅವರು ಪ್ರಶ್ನಿಸಿದ್ದರು". ಎಂದು ಠಾಕೂರ್ ಹೇಳಿಕೆ ನೀಡಿದ್ದಾರೆ.
"ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಮತ್ತು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವ" ಸಲುವಾಗಿ ಅವರು ಈ ರೀತಿ ಮಾಡಿದ್ದರು. ನೈಜ ದೇಶಭಕ್ತರು 2008ರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕರ್ಕರೆಯನ್ನು ದೇಶಭಕ್ತ ಎಂದು ಕರೆಯಲು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. 2019ರಲ್ಲಿ "ನಾನು ಶಾಪ ನೀಡಿದ್ದರಿಂದ ಕರ್ಕರೆ ಮೃತಪಟ್ಟಿದ್ದರು" ಎಂದು ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚನೆ ನಡೆಸಿದ್ದರು.
ಹೇಮಂತ್ ಕರ್ಕರೆ ಮುಂಬೈ ದಾಳಿಯನ್ನು ತಡೆಯಲು ಸತತ ಪ್ರಯತ್ನಗಳನ್ನು ನಡೆಸುವ ಮಧ್ಯೆ ದುಷ್ಕರ್ಮಿಗಳಿಂದ ಹತರಾಗಿದ್ದರು.







