ಶೂಟಿಂಗ್ ವಿಶ್ವಕಪ್: ಮನು ಭಾಕರ್, ಸೌರಭ್ ಚೌಧರಿಗೆ ಬೆಳ್ಳಿ

ಹೊಸದಿಲ್ಲಿ: ಕ್ರೊಯೇಶಿಯದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್ ನ 10 ಮೀ. ಏರ್ ಪಿಸ್ತೂಲ್ ಮಿಶ್ರ ಟೀಮ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಹಾಗೂ ಸೌರಭ್ ಚೌಧರಿ ರಶ್ಯದ ಜೋಡಿಯ ವಿರುದ್ಧ 12-16 ಅಂತರದಿಂದ ಸೋಲನುಭವಿಸಿದರೂ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಶುಕ್ರವಾರ 10 ಮೀ.ಏರ್ ಪಿಸ್ತೂಲ್ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್ ಹಾಗೂ ರಾಹಿ ಸರ್ನೋಬಾತ್ ಕಂಚಿನ ಪದಕ ಜಯಿಸಿದರು.
ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತವು ಕಳಪೆ ಆರಂಭ ಪಡೆದಿದ್ದು, ಖ್ಯಾತ ಶೂಟರ್ ಗಳು ತಮ್ಮ ಸ್ಪರ್ಧೆಗಳಲ್ಲಿ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು.
ಟೂರ್ನಮೆಂಟ್ ನ ಮೊದಲ ದಿನ ಸೌರಭ್ ಚೌಧರಿ ಮಾತ್ರ ಪದಕ ಗೆದ್ದ ಭಾರತದ ಏಕೈಕ ಶೂಟರ್ ಎನಿಸಿಕೊಂಡಿದ್ದರು. ಅವರು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
Next Story