ಸಾರ್ವಜನಿಕ ಸ್ಥಳದಲ್ಲಿ ಹಲವರಿಗೆ ಚೂರಿ ಇರಿದ ವ್ಯಕ್ತಿ

ಬರ್ಲಿನ್,ಜೂ.26: ಜರ್ಮನಿಯ ವುಝೆನ್ಬರ್ಗ್ ನಗರದಲ್ಲಿ ದುಷ್ಕರ್ಮಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಚೂರಿಯಿಂದ ಹಲವಾರು ಮಂದಿಯನ್ನು ಇರಿದು ಹತ್ಯೆಗೈದಿರುವುದಾಗಿ ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಸ್ಥಳೀಯರು ಹಂತಕನನ್ನು ಸುತ್ತುವರಿದು, ಆತನ ಮೇಲೆ ಕುರ್ಚಿಗಳನ್ನು ಮತ್ತು ಕೊಡೆಗಳನ್ನು ಎಸೆದು ಆತನನ್ನು ತಡೆಯುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಆನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಗುಂಡಿಕ್ಕಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story





