1.45 ಕೋಟಿಗೂ ಅಧಿಕ ಲಸಿಕೆ ರಾಜ್ಯಗಳಲ್ಲಿ ಉಳಿದಿದೆ: ಕೇಂದ್ರ ಸರಕಾರ

ಹೊಸದಿಲ್ಲಿ, ಜೂ.26: ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶಗಳ ಬಳಿ 1.45 ಕೋಟಿಗೂ ಅಧಿಕ ಡೋಸ್ ಲಸಿಕೆ ಬಳಕೆಯಾಗದೆ ಉಳಿದಿದ್ದು ಮುಂದಿನ 3 ದಿನದಲ್ಲಿ 19,10,650 ಡೋಸ್ ಲಸಿಕೆ ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಶನಿವಾರ ಹೇಳಿದೆ. ಇದುವರೆಗೆ 31.17 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಒದಗಿಸಿದ್ದು ಇದರಲ್ಲಿ ವ್ಯರ್ಥ ಪ್ರಮಾಣ ಸಹಿತ 29,71,80,733 ಡೋಸ್ ಲಸಿಕೆ ಬಳಕೆಯಾಗಿದ್ದು ಇನ್ನೂ 1,45,21,067 ಡೋಸ್ ಲಸಿಕೆ ಉಳಿದಿದೆ.
ಮುಂದಿನ 3 ದಿನದಲ್ಲಿ ಹೆಚ್ಚುವರಿಯಾಗಿ 19,10,650 ಡೋಸ್ ಲಸಿಕೆಯನ್ನು ಪೂರೈಸಲಾಗುವುದು. ಜೂನ್ 21ರಿಂದ ಸಾರ್ವತ್ರಿಕ ಲಸಿಕೀಕರಣದ ನೂತನ ಹಂತ ಆರಂಭವಾಗಿದೆ. ಲಸಿಕೆ ಪೂರೈಕೆಯಲ್ಲಿ ಹೆಚ್ಚಳ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಲಭಿಸುವ ಲಸಿಕೆ ಬಗ್ಗೆ ಮೊದಲೇ ಸೂಚನೆ ನೀಡುವುದರಿಂದ ಲಸಿಕೀಕರಣ ಅಭಿಯಾನ ಮತ್ತಷ್ಟು ವೇಗ ಪಡೆದಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ.
Next Story





