ಇದು ಸರ್ಕಾರ ಮಾಡಿದ ಕೊಲೆ: ಡಿ.ಕೆ.ಶಿವಕುಮಾರ್ ಆರೋಪ
ಚಾಮರಾಜನಗರ ಆಸ್ಪತ್ರೆಯಲ್ಲಿ 36 ಮಂದಿ ಮೃತ್ಯು ಪ್ರಕರಣ

ಚಾಮರಾಜನಗರ: ಕಳೆದ ತಿಂಗಳು ಇಲ್ಲಿನ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ನಡೆದಿದೆ ಎನ್ನಲಾದ 36 ಮಂದಿಯ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು ಚಾಮರಾಜನಗರದ ಆಸ್ಪತ್ರೆಯಲ್ಲಿ ನಡೆದ ಘಟನೆಯು 'ಇದು ಸಾವಲ್ಲ ಇದು ಸರ್ಕಾರ ಮಾಡಿದ ಕೊಲೆ, 36 ಮಂದಿಯ ಸಾವಿಗೆ ಸರ್ಕಾರವೇ ನೇರ ಹೊಣೆ' ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಘಟನೆಗೆ ಕಾರಣರಾದವರ ಒಬ್ಬರ ಮೇಲೂ ಇದುವರೆಗು ಕ್ರಮ ಕೈಗೊಂಡಿಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡ ಬೇಕಿತ್ತು. ಅವರಿಗೆ ಭಯ, ಜನರು ಆಕ್ರೋಶಗೊಂಡಿದ್ದಾರೆ. ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಇದೆ. ಯಾವ ಬಿಜೆಪಿ ಸಚಿವನೂ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಮೃತರ ಕುಟುಂಬಗಳಿಗೆ ಕೆಪಿಸಿಸಿ ವತಿಯಿಂದ 1 ಲಕ್ಷ ರೂ. ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
Next Story





