ರಾಮಮಂದಿರ ಟ್ರಸ್ಟ್ ಅವ್ಯವಹಾರ ಬಗ್ಗೆ ಸಾಕ್ಷಿ ನೀಡಲು ಆರೆಸ್ಸೆಸ್ ಮುಖ್ಯಸ್ಥರನ್ನು ಭೇಟಿಯಾಗಲಿದ್ದೇನೆ: ಸಂಜಯ್ ಸಿಂಗ್

ಹೊಸದಿಲ್ಲಿ: "ರಾಮ ಮಂದಿರ ನಿರ್ಮಾಣಕ್ಕಾಗಿ ರೂಪಿಸಿರುವ ಟ್ರಸ್ಟ್ ಅವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್, ಈ ಕುರಿತಾದಂತೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಪಡೆದುಕೊಂಡಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಗಳು ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರವರು ಟ್ರಸ್ಟ್ ಸದಸ್ಯ ಅನಿಲ್ ರ ಸಹಾಯದಿಂದ 2 ಕೋಟಿ ಮುಖಬೆಲೆಯ ಜಮೀನನ್ನು 18.5 ಕೋಟಿ ರೂ.ಗಳಿಗೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
"ನಾನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜಿ ಅವರಿಗೆ ಪತ್ರ ಬರೆದಿದ್ದೇನೆ ಮತ್ತು ಅವರನ್ನು ಭೇಟಿಯಾಗಲು ಸಮಯ ಕೇಳಿದ್ದೇನೆ. ಬಿಜೆಪಿ ಮತ್ತು ಟ್ರಸ್ಟ್ ಸದಸ್ಯರು ಭೂಮಿ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಗರಣದ ಪುರಾವೆಯಾಗಿ ಈ ಎಲ್ಲ ದಾಖಲೆಗಳನ್ನು ಹಸ್ತಾಂತರಿಸುತ್ತೇನೆ" "ಸಿಂಗ್ ಹೇಳಿದರು.
ಭೂ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪ ಸಾರ್ವಜನಿಕರ ಗಮನದಲ್ಲಿದ್ದರೂ, "ಎಲ್ಲ ತನಿಖಾ ಸಂಸ್ಥೆಗಳು ಎಲ್ಲಿವೆ ಮತ್ತು ಅವು ಏಕೆ ಕಾರ್ಯನಿರ್ವಹಿಸುತ್ತಿಲ್ಲ?" ಎಂದು ಅವರು ಪ್ರಶ್ನಿಸಿದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಆದರೂ ಪ್ರಶ್ನಿಸಿದ್ದಾರಾ? ಎಂದು ಅವರು ಕೇಳಿದ್ದಾರೆ.







